ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಲು ಶಾಸಕ ಬಯ್ಯಪೂರ ಹೇಳಿಕೆ

060223 Tavaragera Opening of commercial outlets
ತಾವರಗೇರಾ ಪ್ರಾ.ಕೃ.ಪ.ಸ.ಸಂಘದ ವಾಣಿಜ್ಯ ಮಳಿಗೆಗಳ ಆರಂಭೋತ್ಸವದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಪೂರ ಮಾತನಾಡಿದರು.
Published on

ತಾವರಗೇರಾ: ರೈತರು ಸಾಲವನ್ನು ನಿಗದಿತ ಅವಧಿಯೊಳಗೆ ಪಾವತಿಸಿದಾಗ ಸಹಕಾರ ಸಂಘ ಮತ್ತೊಮ್ಮೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪೂರ ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಿಂದ 18 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಸಹಕಾರ ಸಂಘದಿಂದ ವಿವಿಧ ಉದ್ದೇಶಗಳಿಗಾಗಿ ಸಾಲ ಪಡೆಯಬಹುದು. 15 ಸಾವಿರ ರೂ.ಗಳನ್ನು ಸಹಕಾರ ಸಂಘದಿಂದ ಶಿಕ್ಷಣಕ್ಕಾಗಿ ಸಹಕಾರ ಮಹಾ ಮಂಡಲಕ್ಕೆ ನೀಡಿರುವುದು ಶ್ಲಾಘನೀಯ. ತಾವರಗೇರಾ ಪಟ್ಟಣದಲ್ಲಿ 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆೆ. ಆದರೆ ಯಶಸ್ವಿನಿ ಯೋಜನೆಯಲ್ಲಿ 836 ಜನರು ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ರಾಯಚೂರು-ಕೊಪ್ಪಳ ಜಿಲ್ಲೆಗಳ ಕೆಡಿಸಿಸಿ ಬ್ಯಾಂಕಿನ ನಿವೃತ್ತ ಸಿಇಒ ಐ.ಎಸ್.ಗಿರಡ್ಡಿ ಮಾತನಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೀರೇಶ್ವರ ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು. ಆರ್‌ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಶಿವಶಂಕರಗೌಡ ಕಡೂರ, ನಿರ್ದೇಶಕ ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಶರಣಬಸಪ್ಪ, ಕಾರ್ಯದರ್ಶಿ ಶ್ಯಾಮೀದ ಆಲಂಬದಾರ, ಬ್ಯಾಂಕಿನ ಕ್ಷೇತ್ರ ವೀಕ್ಷಕ ಅಲ್ಲಮಪ್ರಭು ಡಾಣಿ, ಚಿನ್ಮಯಿ ಪಾಟೀಲ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಚಿನ್ನಪ್ಪ ವಜ್ರ ಶೆಟ್ಟಿ, ಸಂಘದ ನಿರ್ದೇಶಕರಾದ ಲಕ್ಷ್ಮಣಸಿಂಗ್, ಆದಪ್ಪ, ಶೇಖರಪ್ಪ, ಶಂಕ್ರಪ್ಪ, ಹುಸೇನ ನಾಯ್ಕ, ಭದ್ರಪ್ಪ, ಕನಕಪ್ಪ, ಮಹಜರ ಪಾಷಾ, ಆನಂದ ಭಂಡಾರಿ, ಬಸಮ್ಮ , ಸಂಗಮ್ಮ, ಅಲ್ಲಮಪ್ರಭು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net