ಪ್ರತಿ ಶುಕ್ರವಾರ ಲಸಿಕೆ ಕಾರ್ಯಕ್ರಮ

Tavaragera Covid-19 vaccine campaign in Masjid-e-Aqsa
ತಾವರಗೇರಾದ ಮಸೀದ್-ಏ-ಆಕ್ಸಾದಲ್ಲಿ ಕೋವಿಡ್-19 ಲಸಿಕೆ ಅಭಿಯಾನ ನಡೆಯಿತು.
Published on

ತಾವರಗೇರಾ: ಪಟ್ಟಣದ ಜಮಾತ್-ಎ-ಇಸ್ಲಾಮಿ ಹಿಂದ್ ಘಟಕದಿಂದ ಮಸೀದ್-ಏ-ಅಕ್ಸಾದಲ್ಲಿ ಶನಿವಾರ ಕೋವಿಡ್-19 ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಘಟನೆ ಅಧ್ಯಕ್ಷ ಮೈನುದ್ದೀನ್ ಮನಿಯಾರ್ ಮಾತನಾಡಿ, ಮಹಾಮಾರಿ ಕರೊನಾ ಹಿಮ್ಮೆಟ್ಟಿಸಲು ಎಲ್ಲರೂ ಲಸಿಕೆ ಹಾಕಿಕೊಳ್ಳಬೇಕು. ಪ್ರತಿ ಶುಕ್ರವಾರ ಮಸೀದ್-ಎ-ಅಕ್ಸಾದ ಆವರಣದಲ್ಲಿ ಮಧ್ಯಾಹ್ನ 2ರಿಂದ 4ರವರೆಗೆ ಲಸಿಕೆ ಹಾಕಲಾಗುವುದು. ಜನರು ಆಧಾರ್ ಕಾರ್ಡ್ ಜತೆಗೆ ಬರಬೇಮಕು ಎಂದರು. ಸಮುದಾಯ ಆರೋಗ್ಯ ಕೇಂದ್ರದ ಆನಂದ, ಸಂಘಟನೆಯ ಅಮೀನ್ ಸಾಬ, ಮುಜಾಹಿದ್ ಪಾಷಾ, ಮಹಿಬೂಬ್ ಬಂದಗಿ, ರಫಿವುಲ್ಲಾ ಹಾಫೀಜ್, ಸಲಿಂ ಮನಿಯಾರ, ಎಂ.ಡಿ.ರಫೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net