

ತಾವರಗೇರಾ: ಪಟ್ಟಣದ ವ್ಯಾಪ್ತಿ ಪ್ರದೇಶದಲ್ಲಿ ಮಂಗಳವಾರ ಸುರಿದ ಮಳೆಯಿಂದ ಮಾರಕಟ್ಟೆಯಲ್ಲಿ ನೀರು ಸಂಗ್ರಹವಾಗಿ ಜನರಿಗೆ ತೊಂದರೆ ಉಂಟಾಗಿದೆ.
ಮಳೆ ಮಾಪನ ಕೇಂದ್ರದ ಪ್ರಕಾರ 89ಎಂ.ಎಂ.ಮಳೆಯಾಗಿದೆ. ಗಾಂಧಿ ಚೌಕದಿಂದ ಪೊಲೀಸ್ ಠಾಣೆವರೆಗೆ ರಸ್ತೆ ಅಗಲೀಕರಣ ಮಾಡುವ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಮಣ್ಣಿನ ದಿಣ್ಣೆಗಳಿಂದ ನೀರು ಹರಿದು ತೊಂದರೆಯಾಗಿದೆ.
ತಗ್ಗು ಪ್ರದೇಶಗಳಲ್ಲಿರುವ ವೆಂಕಟೇಶ, ಆಂಜನೇಯ ಇವರ ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯಗಳು, ಅಗತ್ಯ ವಸ್ತುಗಳು ನಾಶವಾಗಿವೆ. ಚಂದ್ರಶೇಖರ ಐಲಿ ಇವರ ಬಟ್ಟೆ ಅಂಗಡಿಗೆ, ಗೋದಮಿಗೆ ನೀರು ನುಗ್ಗಿವೆ. ಎಪಿಎಂಸಿ ಸುತ್ತಲೂ ನೀರು ನಿಂತಿದ್ದು, ಅಪಾರ ನಷ್ಟ ಸಂಭವಿಸಿದೆ.