ನಾಲ್ಕು ಬೋರ್‌ವೆಲ್ ಗ್ರಾಪಂ ಸುಪರ್ದಿಗೆ

borewell VISIT
ಹೊಮ್ಮಿನಾಳ ಗ್ರಾಮದಲ್ಲಿ ನಾಲ್ಕು ಕೊಳವೆಬಾವಿಗಳನ್ನು ಗ್ರಾಪಂಗೆ ಸುಪರ್ದಿಗೆ ತಗೆದುಕೊಳ್ಳಲಾಯಿತು. ತಾಪಂ ಇಒ ಪಂಪಾಪತಿ, ಪ್ರಮುಖರಾದ ಸುರೇಶ, ಬಸವರಾಜ, ಲಲಿತಮ್ಮ, ಲಿಂಗರಾಜ, ನಿತ್ಯಾನಂದ ಗೌಡ, ಶರಣಪ್ಪ ಇತರರಿದ್ದರು.
Published on

ತಾವರಗೇರಾ: ಸಮೀಪದ ಲಿಂಗದಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಮ್ಮಿನಾಳ ಗ್ರಾಮದ ನಾಲ್ಕು ಕೊಳವೆ ಬಾವಿಗಳನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ ನೇತೃತ್ವದಲ್ಲಿ ರೈತರಿಂದ ಗ್ರಾಪಂಗೆ ಬುಧವಾರ ಸುಪರ್ದಿಗೆ ತಗೆದುಕೊಳ್ಳಲಾಯಿತು.

ಹೊಮ್ಮಿನಾಳ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡು ಬಂದಿತ್ತು. ಸರ್ಕಾರದ ವತಿಯಿಂದ ರಸ್ತೆಯ ಅಕ್ಕ, ಪಕ್ಕದಲ್ಲಿ ಕೊಳವೆ ಬಾವಿಗಳನ್ನು ಹಾಕಿಸಲಾಗಿತ್ತು. ಆದರೆ ರಸ್ತೆ ಪಕ್ಕದ ರೈತರು ಜಮೀನುಗಳಿಗೆ ನೀರು ಬಿಟ್ಟುಕೊಳ್ಳುತ್ತಿದ್ದರು. ಇದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತ್ತು.

ಹೊಮ್ಮಿನಾಳ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷದಿಂದ ನೀರಿನ ಸಮಸ್ಯೆ ಕಂಡು ಬಂದರೂ ಸಹ ರೈತರು ಗ್ರಾಪಂನವರಿಗೆ ಕೊಳವೆ ಭಾವಿ ನೀರನ್ನು ಕೊಡದೆ ಸತಾಯಿಸಿದ್ದರು. ತಾಪಂ ಕಾರ್ಯನಿರ್ವಾಹ ಅಧಿಕಾರಿ ಪಂಪಾಪತಿ ಹಿರೇಮಠ ನೇತೃತ್ವದಲ್ಲಿ ಗ್ರಾಮದ ನಾನಾ ರಸ್ತೆಯ ಪಕ್ಕದಲ್ಲಿದ್ದ ನಾಲ್ಕು ಕೊಳವೆಬಾವಿಗಳನ್ನು ಗ್ರಾಪಂ ಸುಪರ್ದಿಗೆ ತೆಗದುಕೊಳ್ಳುವ ಮೂಲಕ ನೀರಿನ ಸಮಸ್ಯೆ ನೀಗಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುರೇಶ ಲಿಂಗದಹಳ್ಳಿ, ಗ್ರಾಪಂ ಪಿಡಿಒ ಬಸವರಾಜ ರ‌್ಯಾವಣಿಕಿ, ಗ್ರಾಪಂ ಅಧ್ಯಕ್ಷೆ ಲಲಿತಮ್ಮ ನಿತ್ಯಾನಂದಗೌಡ ಪಾಟೀಲ್, ತಾಪಂ ಸಿಬ್ಬಂದಿ ಸಂಗಪ್ಪ, ಮುಖಂಡರಾದ ಲಿಂಗರಾಜ ಕಲಭಾವಿ, ಶರಣಪ್ಪ ಸೇರಿದಂತೆ ತಾಪಂ ಹಾಗೂ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net