ಮದ್ಯ ಕಳವು ಮಾಡಿದ್ದವರಿಗೆ ಜೈಲು ಶಿಕ್ಷೆ

jail
Published on

ತಾವರಗೇರಾ: 2016 ಏ. 13ರ ರಾತ್ರಿ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮೇಘಾ ಬಾರ್‌ನ ಹಿಂದೆ ಇರುವ ಮದ್ಯದ ಗೋದಾಮಿನ ಬೀಗದ ಮುರಿದು ಮದ್ಯದ ಬಾಟಲಿ ಕಳವು ಮಾಡಿದ್ದ ಆರು ಮಂದಿ ಅಪರಾಧಿಗಳು ಪರಿಗಣಿಸಿ ಐದು ವರ್ಷ ವರ್ಷ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ದಂಡ ವಿಧಿಸಿ ಕುಷ್ಟಗಿ ನ್ಯಾಯಾಲಯ ಆದೇಶಿಸಿದೆ.

ಅಪರಾಧಿಗಳಾದ ಹುಬ್ಬಳ್ಳಿಯ ದೊಡ್ಡಹನುಮಂತ, ಸಣ್ಣ ಹನುಮಂತ, ಹುನಗುಂದದ ಲಕ್ಷ್ಮಣ ಗೊಲ್ಲರ್, ಆದೋನಿಯ ಪರಶುರಾಮ, ತುರವಿಹಾಳದ ರಮೇಶ, ಗೆಜ್ಜಲಗಟ್ಟಾದ ಸುರೇಶ ಶಾಸ್ತ್ರಿಗೆ ಕಲಂ 457ರ ಅಡಿ ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂ. ದಂಡ ಹಾಗೂ ಕಲಂ 380ರ ಅಡಿ ಅಪರಾಧಕ್ಕೆ ಮೂರು ವರ್ಷ ಕಾರಾಗೃಹ ಮತ್ತು ತಲಾ ಹತ್ತು ಸಾವಿರ ರೂ. ದಂಡ ವಿಧಿಸಿ ಕುಷ್ಟಗಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎ್ಸಿ ನ್ಯಾಯಾಧೀಶ ರಫಿಕ್ ಅಹಮದ್ ಆದೇಶಿಸಿದ್ದಾರೆ. ಕುಷ್ಟಗಿ ಆರಕ್ಷಕ ವೃತ್ತ ನಿರೀಕ್ಷಕರಾದ ಗಿರೀಶ ರೋಡಕರ್, ಪಿಎಸ್‌ಐ ಅಮರೇಶ ಹುಬ್ಬಳ್ಳಿ ತನಿಖೆ ಕೈಗೊಂಡಿದ್ದರು. ಪ್ರಕರಣ ಕುರಿತು ಅಭಿಯೋಜಕ ಅಭೀದುಲ್ಲಾ ಇಮಾಮ್ ಸಾಬ್ ವಿಚಾರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net