ಟಾಟಾ ಏಸ್ ಪಲ್ಟಿಯಾಗಿ ಒಬ್ಬ ಸಾವು

mdl accident
ಜಕ್ಕೇರಮುಡು ತಾಂಡಾದ ಹತ್ತಿರ ಟಾಟಾ ಏಸ್ ಪಲ್ಟಿಯಾಗಿರುವುದು.
Published on

ಮುದಗಲ್: ಪಟ್ಟಣದಿಂದ ಮಾರಲದಿನ್ನಿ ತಾಂಡಾಕ್ಕೆ ತೆರಳುತ್ತಿದ್ದ ಟಾಟಾ ಏಸ್ ವಾಹನ ಜಕ್ಕೆರಮುಡು ತಾಂಡಾದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿಯಾಗಿ ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದು, ಮೂರು ವರ್ಷ ಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ.

ಸೋಮ್ಲಾನಾಯಕ ತಾಂಡಾದ ಕೃಷ್ಣಪ್ಪ ರಾಜಪ್ಪ (55) ಮೃತ. ಗಾಯಗೊಂಡ ಮೂರು ವರ್ಷ ಮಗು ಗಣೇಶ್, ಹನುಮಮ್ಮ ದೇವಪ್ಪ, ಸಂದೀಪ್, ದಾವಲ್‌ಬೀ ಚಿತ್ತೇಸಾಬ್ ಗಾಯಗೊಂಡಿದ್ದು, ಸ್ಥಳೀಯರ ಸಹಾಯದೊಂದಿಗೆ ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.

ಮುದಗಲ್ ಠಾಣೆ ಪಿಎಸ್‌ಐ ವೆಂಕಟೇಶ ಮಾಡಗೇರಿ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net