ಟಾಟಾ ಏಸ್ ಡಿಕ್ಕಿಯಾಗಿ ಯುವಕ ಸಾವು

bike accident 1
Published on

ಹುಬ್ಬಳ್ಳಿ: ದ್ವಿಚಕ ್ರವಾಹನ ಹಾಗೂ ಟಾಟಾ ಏಸ್ ವಾಹನಗಳ ಮಧ್ಯೆನಡೆದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ನೂಲ್ವಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆಕಾಶ ಎಚ್. (21) ಮೃತ ಯುವಕ. ಅರ್ಜುನ ನಂದೆನ್ನವರ ಎಂಬಾತ ಟಾಟಾ ಏಸ್ ವಾಹನವನ್ನು ಅತಿವೇಗವಾಗಿ ಚಲಾಯಿಸುತ್ತ, ಹುಬ್ಬಳ್ಳಿಯಿಂದ ಹಾವೇರಿ ಕಡೆ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಮೇಲಿದ್ದ ಸವಾರರಿಗೆ ಗಂಭೀರವಾಗಿ ಗಾಯವಾಗಿದೆ. ಚಿಕಿತ್ಸೆಗೆ ಕಿಮ್ಸ್​ಗೆ ರವಾನಿಸುವ ವೇಳೆ ಆಕಾಶ ಮೃತಪಟಿದ್ದಾನೆ. ರಾಜು ಅಂಬಿಗೇರ ಗಾಯಗೊಂಡಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net