ಲಾರಿ ಡಿಕ್ಕಿಯಾಗಿ ಟಾಟಾ ಎಸಿ ಚಾಲಕನಿಗೆ ಗಾಯ

Crime Logo
Published on

ಬೈಲುಕುಪ್ಪೆ: ಸಮೀಪದ ಕೊಪ್ಪ-ಬಿ.ಎಂ.ರಸ್ತೆಯಲ್ಲಿ ಟಾಟಾ ಎಸಿಗೆ ಲಾರಿ ಭಾನುವಾರ ಡಿಕ್ಕಿ ಹೊಡೆದ ಪರಿಣಾಮ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.

ಸಮೀಪದ ಮರಡಿಯೂರು ಗ್ರಾಮದ ಸುಹೇಲ್ (31) ಗಾಯಗೊಂಡ ಚಾಲಕ.

ಮನೆಮನೆಗೆ ಗ್ಯಾಸ್ ಸಿಲಿಂಡರ್ ಸಪ್ಲೈ ಮಾಡಲೆಂದು ಬೈಲುಕುಪ್ಪೆಯಿಂದ ಕೊಪ್ಪ ಕಡೆಗೆ ಹೋಗುತ್ತಿದ್ದಾಗ ಬೈಲುಕುಪ್ಪೆ ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ಟಾಟಾ ಎಸಿ ಚಾಲಕನನ್ನು ಕುಶಲನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಖಾಸಗಿ ಆಸ್ಪತ್ರೆಗೆ ದಾಖಲಾಸಲಾಯಿತು ಎನ್ನಲಾಗಿದೆ.

ತೆಲಂಗಾಣ ಮೂಲದ ಲಾರಿ ಚಾಲಕನನ್ನು ಅರುಣ್ ಎಂದು ಗುರುತಿಸಲಾಗಿದೆ. ಬೈಲುಕುಪ್ಪೆ ಠಾಣೆ ಪಿಎಸ್‌ಐ ರವಿಕುಮಾರ್ ಪ್ರಕರಣ ದಾಖಲಿಸಿಕೊಂಡು ಎರಡೂ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net