ವೇತನ ಬಿಡುಗಡೆ ಮಾಡದಕ್ಕೆ ಆಕ್ರೋಶ: ಟಾಸ್ಕ್‌ವರ್ಕ್ ದಿನಗೂಲಿ ನೌಕರರ ಪ್ರತಿಭಟನೆಗೆ ಬೆದರಿದ ಅಧಿಕಾರಿಗಳು

Protettt
Published on

ಮಂಡ್ಯ: ಮೂರು ತಿಂಗಳ ವೇತನ ಬಿಡುಗಡೆಗೆ ಒತ್ತಾಯಿಸಿ ಟಾಸ್ಕ್‌ವರ್ಕ್ ದಿನಗೂಲಿ ನೌಕರರ ಸಂಘದಿಂದ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಟರ ಆರಂಭಿಸಲಾಯಿತು. ಆದರೆ ನಿಗಮದ ಇಇ ಎಚ್.ಎಸ್.ನಾಗರಾಜು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ನೌಕರರನ್ನು ಬೆಂಬಲಿಸಿ ಮುಷ್ಕರದಲ್ಲಿ ಭಾಗವಹಿಸಿದ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ದಿನಗೂಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಸೇರಬೇಕಾದ ಪಿಎಫ್ ಹಣವನ್ನು ಗುತ್ತಿಗೆದಾರ ಭರಿಸಿಲ್ಲ. ಇದಲ್ಲದೆ ಇಎಸ್‌ಐ ಕಾರ್ಡ್ ಕೂಡ ವಿತರಿಸಿಲ್ಲ. ಹೀಗಾದರೆ ನೌಕರರಿಗೆ ಜೀವನ ಭದ್ರತೆ ಎಲ್ಲಿರುತ್ತದೆ. ನೌಕರರಿಗೆ ಸೇರಿದ ಹಣವನ್ನು ಕೊಡದಿದ್ದರೆ ಕ್ರಿಮಿನಲ್ ಮೊಕದ್ದಮೆ ಆಗುತ್ತದೆ. ಕೂಡಲೇ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಹೆಮ್ಮಿಗೆ ಚಂದ್ರಶೇಖರ್, ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ರಾಮೇಗೌಡ, ಸಹ ಕಾರ್ಯದರ್ಶಿ ಮಹೇಶ, ಖಜಾಂಚಿ ಎಸ್.ಎಂ.ರವಿ, ಸಂಘಟನಾ ಕಾರ್ಯದರ್ಶಿ ರವಿಕುಮಾರ, ಸದಸ್ಯರಾದ ವೈರಮುಡಿ ಬನ್ನೂರು, ಸತೀಶ್, ಕುಮಾರ್, ಪ್ರಕಾಶ್, ಚಿಕ್ಕಣ್ಣ, ಪುಟ್ಟೇಗೌಡ, ರಾಮೇಗೌಡ, ಬಿ.ಸಿ.ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net