ಕುಡುಕರ ಅಡ್ಡೆಯಾದ ತರೀಕೆರೆ ರಾಷ್ಟ್ರೀಯ ಹೆದ್ದಾರಿ

29 TKE 3(1)
Published on

ತರೀಕೆರೆ: ಈವರೆಗೆ ರಸ್ತೆ ಇಕ್ಕೆಲಗಳು, ನಿರ್ಮಾಣ ಹಂತದ ಕಟ್ಟಡಗಳು, ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಕಚೇರಿಗಳು, ಸರ್ಕಾರಿ ಶಾಲೆಗಳ ಆವರಣ ಹೀಗೆ ಸಿಕ್ಕ,ಸಿಕ್ಕ ಕಡೆ ಅಡ್ಡೆ ಮಾಡಿಕೊಂಡಿದ್ದ ಕುಡುಕರು ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ನೂತನವಾಗಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ನಡುವೆಯೇ ಅಡ್ಡ ಶ್‌ಟಿ ಮಾಡಿಕೊಂಡಿದ್ದಾರೆ.

ಕತ್ತಲಾದಾಗ ಆಗಾಗ ಸಂಚರಿಸುವ ವಾಹನಗಳ ಹೊರತಾಗಿಯೂ ಪಟ್ಟಣ ಹೊರವಲಯದ ಅತ್ತಿಗನಾಳು ಗ್ರಾಮದಂಚಿನಲ್ಲಿ ತುಮಕೂರು-ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ವಿಶಾಲವಾದ ಚತುಷ್ಪಥ ರಸ್ತೆ ಇದೀಗ ಕುಡುಕರ ಅಡ್ಡೆಯಾಗಿ ಮಾರ್ಪಾಡಾಗಿದೆ. ಕುಡಿದ ಬಳಿಕ ರಸ್ತೆ ಮಧ್ಯೆ ಬಿಟ್ಟು ಹೋಗುತ್ತಿರುವ ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿವೆ.

ಕುಡುಕರ ಹಾವಳಿ ನಿರ್ಜನ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿವರೆಗೂ ವಿಸ್ತರಿಸಿಕೊಂಡಿರುವುದರಿಂದ ಈ ಭಾಗದ ತೋಟಗಳಿಗೆ ರಾತ್ರಿ ಹೊತ್ತು ಓಡಾಡುವ ರೈತರು ಆತಂಕದಲ್ಲಿಯೇ ಸಂಚರಿಸುವಂತಾಗಿದೆ. ಒಂಟಿ ವಾಹನ ಸವಾರರು ಆತಂಕ ಪಡುವಂತಾಗಿದೆ. ಸಂಬಧಪಟ್ಟವರು ಕುಡುಕರ ಹಾವಳಿ ನಿಯಂತ್ರಿಸಿ ನಶೆ ಅಮಲಿನಲ್ಲಿ ಸಂಭವಿಸಬಹುದಾದ ಅವಘಡ ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net