ತರೀಕೆರೆ ಕ್ಷೇತ್ರದಲ್ಲಿ 10 ಸಾವಿರ ಹಕ್ಕುಪತ್ರವಿತರಣೆ ಗುರಿ

TKE 1(MLA)
Published on

ತರೀಕೆರೆ: ಹಕ್ಕುಪತ್ರ ವಿತರಣೆ ಮೂಲಕ ಹತ್ತಾರು ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಏರ್ಪಡಿಸಿದ್ದ ಕಂದಾಯ ಗ್ರಾಮ, ಉಪ ಗ್ರಾಮ, 94 ಸಿ ಪೋಡಿಮುಕ್ತ ಗ್ರಾಮ ಹಾಗೂ ಸ್ವಾಮಿತ್ವ ಯೋಜನೆಯ ಲಾನುಭವಿಗಳಿಗೆ ಹಕ್ಕುಪತ್ರ. ವಿವಿಧ ಇಲಾಖೆಗಳ ಯೋಜನೆ ಮೂಲಕ ಆಯ್ಕೆಯಾಗಿರುವ ಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಮತ್ತು ಸರ್ಕಾರಿ ಯೋಜನೆಗಳ ಮಾಹಿತಿ ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಹಂತದಲ್ಲಿ ಕಂದಾಯ ಮತ್ತು ಉಪ ಗ್ರಾಮಗಳನ್ನು ರಚಿಸಿ ವಾಸವಿದ್ದರೂ, ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದ ಜನರಿಗೆ ಕಂದಾಯ ಗ್ರಾಮ, ಉಪ ಗ್ರಾಮ, 94 ಸಿ ಪೋಡಿಮುಕ್ತ ಗ್ರಾಮ ಹಾಗೂ ಸ್ವಾಮಿತ್ವ ಯೋಜನೆ ಮೂಲಕ ಹಕ್ಕುಪತ್ರ ಕೊಡಿಸಿಕೊಡಲು ಅವಿರತ ಶ್ರಮಿಸಲಾಗಿದೆ. ತರೀಕೆರೆ ಕ್ಷೇತ್ರ ವ್ಯಾಪ್ತಿಯ 10 ಸಾವಿರ ಕುಟುಂಬಗಳಿಗೆ ಮನೆಗಳ ಹಕ್ಕುಪತ್ರ ವಿತರಿಸುವ ಗುರಿ ಹೊಂದಲಾಗಿದೆ. ಇದರಿಂದ ಸರಿ ಸುಮಾರು 40 ಸಾವಿರ ಜನರಿಗೆ ಅನುಕೂಲವಾಗಿದೆ ಎಂದರು.

ಚುನಾವಣೆ ಪೂರ್ವದಲ್ಲಿ ಪ್ರಚಾರಕ್ಕೆ ಹೋದ ಕಡೆ ಹಕ್ಕುಪತ್ರದ ಬೇಡಿಕೆ ಇತ್ತು. ಇದರಿಂದಲೇ ಸರ್ಕಾರದ ಗಮನ ಸೆಳೆದು ತರೀಕೆರೆ ಕ್ಷೇತ್ರ ಮಾತ್ರವಲ್ಲ, ರಾಜ್ಯದೆಲ್ಲೆಡೆ ಬಗೆಹರಿಯದೆ ಉಳಿದ ಸಮಸ್ಯೆಯನ್ನು ಸಿಎಂ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಸಾಕಾರಗೊಳಿಸುವ ಪ್ರಯತ್ನ ಮಾಡಲಾಗಿದೆ. ಒಮ್ಮತದ ಚರ್ಚೆ ಬಳಿಕ ಅಧಿವೇಶನದಲ್ಲೂ ಪ್ರತಿಧ್ವನಿಸಿ ಹಕ್ಕುಪತ್ರ ವಿತರಿಸಲು ಅವಕಾಶ ದೊರೆತಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದ್ದು, 35 ಇಲಾಖೆ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಲಾನುಭವಿಗಳ ಆಯ್ಕೆ ಮಾಡಿಕೊಳ್ಳಲಾಗಿದೆ. ಅರ್ಹರಿಗೆ ಇಂದು ಹಲವು ಸೌಲಭ್ಯ ವಿತರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net