

ಹುಬ್ಬಳ್ಳಿ : ಇಲ್ಲಿನ ತಾರಿಹಾಳದಲ್ಲಿನ 110/11 ಕೆ.ವಿ ವಿದ್ಯುತ್ ಉಪಕೇಂದ್ರದ ಫಿಡರ್ ನಿರ್ವಹಣೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೆ. 21ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಶೃತಿ ನಗರ, ವಾಜಪೇಯಿ ನಗರ, ಅಕ್ಷಯ ಟೌನಶಿಪ್, ಗಣೇಶ ನಗರ, ಮೀನಾ ಪ್ಲೊರಿಂಗ್, ಬಸವೇಶ್ವರ ನಗರ, ವಡ್ಡರ ಓಣಿ ಹಾಗೂ ಸುತ್ತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.