ತಾರಿಹಾಳದಲ್ಲಿ ಕಲ್ಮೇಶ್ವರ ಜಾತ್ರೆ

IMG-20250301-WA0021_1.jpg
Published on

ಹುಬ್ಬಳ್ಳಿ: ತಾಲೂಕಿನ ತಾರಿಹಾಳ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವವನ್ನು ಮಾರ್ಚ್ 3ರಂದು ಆಯೋಜಿಸಲಾಗಿದೆ.

ಜಾತ್ರೆ ಅಂಗವಾಗಿ ಮಹಾದಾಸೋಹಿ ಶ್ರೀ ಕಲಬುರಗಿ ಶರಣ ಬಸವೇಶ್ವರರ 28ನೇ ಪುರಾಣ ಪ್ರವಚನ ಸಂಭ್ರಮದಿಂದ ನಡೆಯಿತು.

ಮಾ. 3ರಂದು ಬೆಳಗ್ಗೆ ಶ್ರೀ ಕಲ್ಮೇಶ್ವರ ಕರ್ತೃ ಗದ್ದುಗೆಗೆ ಶ್ರೀ ಮಾರುತೇಶ್ವರ ಹಾಗೂ ಶ್ರೀ ಗ್ರಾಮದೇತೆಗೆ ಅಭಿಷೇಕ, ಕುಂಭೋತ್ಸವ, ಶರಣ ಬಸವೇಶ್ವರ ಭಾವಚಿತ್ರ ಹಾಗೂ 51 ಜೋಡಿ ಎತ್ತುಗಳ ಮೆರವಣಿಗೆ ಏರ್ಪಡಿಸಲಾಗಿದೆ.

ಮಧ್ಯಾಹ್ನ 12.20ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹಗಳು ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿವೆ. ಸಂಜೆ 5ಕ್ಕೆ ಭಾವೈಕ್ಯತೆಯ ರಥೋತ್ಸವ ಏರ್ಪಡಿಸಲಾಗಿದೆ. ಸಂಜೆ 7ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net