

ಮಂಗಳೂರು: ಭಾರತೀಯ ಟಾರ್ಗೆಟ್‌ಬಾಲ್ ಅಸೋಸಿಯೇಶನ್ ಇದರ ವತಿಯಿಂದ ರಾಜಸ್ತಾನದ ಅಲ್ವಾರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಟಾರ್ಗೆಟ್‌ಬಾಲ್ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಷ್ಟ್ರ ಮಟ್ಟದ ಟಾರ್ಗೆಟ್‌ಬಾಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರವೀಣ್ ಶೆಟ್ಟಿ ಮತ್ತು ಡಾ.ಮಮತಾ ಶೆಟ್ಟಿ ದಂಪತಿ ಪುತ್ರ ಷಷ್ಠೀಶ್ ಶೆಟ್ಟಿ ಹಾಗೂ ರವಿಚಂದ್ರ ಶೆಟ್ಟಿಗಾರ್ ಮತ್ತು ಯೋಗಿಣಿ ದಂಪತಿ ಪುತ್ರ ಯತೀಶ್ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.