20 ಸಾವಿರ ಪ್ರಕರಣ ಇತ್ಯರ್ಥ ಗುರಿ

IMG20250711210339.jpg
Published on

ಬೆಳಗಾವಿ: ಜಿಲ್ಲೆಯ 85 ನ್ಯಾಯಾಲಯಗಳಲ್ಲಿ ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು, 20 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ ಹಾಕಿಕೊಂಡಿದ್ದೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 85 ನ್ಯಾಯಾಲಯಗಳಲ್ಲಿ 1.47 ಲಕ್ಷ ಪ್ರಕರಣ ಇತ್ಯರ್ಥಕ್ಕೆ ನೋಂದಣಿಯಾಗಿವೆ. ಅದರಲ್ಲಿ ಗುರುತಿಸಿರುವ 20 ಸಾವಿರ ಪ್ರಕರಣ ಇತ್ಯರ್ಥಪಡಿಸಬಹುದಾಗಿದೆ. ಬೆಳಗಾವಿ ಸೇರಿ ರಾಜ್ಯದ 6 ಕಡೆ ಕಾಯಂ ಲೋಕ ಅದಾಲತ್ ನಡೆಯುತ್ತಿದ್ದು ರಾಜಿಯಾಗುವಂತಹ ಪ್ರಕರಣ ನೋಂದಾಯಿಸಿಕೊಂಡು ಹಣ ಪಾವತಿಸದೆ ಇತ್ಯರ್ಥಪಡಿಸಲಾಗುತ್ತಿದೆ ಎಂದರು.

ಎರಡೂ ಕಡೆಯ ಕಕ್ಷಿದಾರರನ್ನು ಕರೆಸಿ ಹಿರಿಯ ವಕೀಲರ ಸಮ್ಮುಖದಲ್ಲಿ ಮಧ್ಯಸ್ಥಿಕೆ ವಹಿಸಿ ರಾಜೀ- ಸಂಧಾನಕ್ಕೆ ಒತ್ತಾಯ ಮಾಡದೆ ಮಾತುಕತೆ ನಡೆಸಲಾಗುವುದು. ಪ್ರಕರಣ ಇತ್ಯರ್ಥವಾದಲ್ಲಿ ನ್ಯಾಯಾಲಯ ಇಬ್ಬರೂ ಕಕ್ಷಿದಾರರಿಂದ ಮುಚ್ಚಳಿಕೆ ಪಡೆದು ಪ್ರಕರಣ ಖುಲಾಸೆ ಮಾಡಲಾಗುವುದು. ಈ ಕುರಿತು 90 ದಿನಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಾಥಿ ಸಮಿತಿ, ಜಾಗೃತಿ ಸಮಿತಿ, ಆಶಾ ಸಮಿತಿ, ಸಂವಾದ ಮತ್ತು ಡೌನ್ ಎಂದು 5 ಸಮಿತಿ ರಚಿಸಲಾಗಿದ್ದು, ಸಾರ್ವಜನಿಕರಿಗೆ ಮಾಹಿತಿ, ಕಾನೂನು ಸಲಹೆ, ಸರ್ಕಾರಿ ಯೋಜನೆಗಳ ಅರಿವು ಸೇರಿ ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net