ಬಸ್​ ಪ್ರಯಾಣಿಕರ 100 ತಂಗುದಾಣ ನಿರ್ಮಾಣ ಗುರಿ

27MUDALGI1
Published on

ಮೂಡಲಗಿ: ಗ್ರಾಮೀಣ ಪ್ರದೇಶಗಳ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಬಸ್​ ಪ್ರಯಾಣಿಕರ 100 ತಂಗುದಾಣ ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಶೇ.50 ಪೂರ್ಣಗೊಂಡಿವೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ ಹಾಗೂ ಹುಣಶ್ಯಾಳ ಪಿ.ಜಿ. ಗ್ರಾಮಗಳಲ್ಲಿ ರಾಜ್ಯಸಭಾ ಸದಸ್ಯರ ಸ್ಥಳಿಯ ಪ್ರದೇಶಾಭಿವದ್ಧಿ ಯೋಜನೆ ಅನುದಾನದಲ್ಲಿ ಬಸ್​ ಪ್ರಯಾಣಿಕರ ತಂಗುದಾಣಗಳ ಉದ್ಘಾಟನೆ ಮತ್ತು ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಂಸದರ ನಿಧಿ ಗ್ರಾಮೀಣ ಪ್ರದೇಶದ ಜನರ ಅಗತ್ಯ ಪೂರೆಸುವ ಅಯಪಾತ್ರೆಯಾಗಿದೆ. ಅನುದಾನ ಬಳಕೆಗೆ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಬೀರನಗಡ್ಡಿ ಗ್ರಾಮದ ಮುಖಂಡರಾದ ಬಸವರಾಜ ಕೋಟಗಿ, ಅಲ್ಲಯ್ಯ ಪೂಜೇರಿ, ಗೌಡಪ್ಪ ಕೋಟಗಿ, ಸತ್ತೆಪ್ಪ ಕಳಜಕನ್ನವರ, ಕಲ್ಲಪ್ಪ ಪಾಗಾದ, ಪರಪ್ಪ ಕೋಟಗಿ, ಶಿವಗೊಂಡ ಬೋರಗಲ್​, ರಮೇಶ ಸಂಪಗಾಂವ, ಮಂಜುಳಾ ಡಬ್ಬನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net