ಹುಬ್ಬಳ್ಳಿ: ಕಾಗಿರ್ಲ್ ಯುದ್ಧ ಗೆದ್ದು 25 ವರ್ಷ. ಇನ್ನೆನಿದ್ದರೂ "ಟಾರ್ಗೆಟ್ ಪಿಒಕೆ' ಎಂಬ ಹೆಸರಿನಲ್ಲಿ ಜಾಗೃತಿ ಓಟವನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ನಗರದ ತೋಳನಕೆರೆ ಗೇಟ್ ನಿಂದ ಆರಂಭವಾದ ಓಟ ಸಿದ್ಧೇಶ್ವರ ಪಾರ್ಕ್ ಮೂಲಕ ರವಿನಗರ ಶ್ರೀ ಗಣೇಶ ದೇವಸ್ಥಾನಕ್ಕೆ ಬಂದು ತಲುಪಿತು.
ನಂತರ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಿ, ಸೈನಿಕರ ಸಾಹಸ, ತ್ಯಾಗ ಬಲಿದಾನಗಳಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಯುವ ಮಿತ್ರರು ಅಗ್ನೀವಿರರಾಗಿ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂದು ವಿನಂತಿಸಿದರು.
ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಬಂದ ನಂತರ ಹಲವಾರು ಅಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಭಾರತದ ಸೇನೆ ಸದೃಢವಾಗಿದೆ. ಬೇರೆ ದೇಶಗಳು ನಮ್ಮ ಮೇಲೆ ಯುದ್ಧ ಮಾಡಲು ಕನಸಿನಲ್ಲೂ ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ನಿವೃತ್ತ ಸೈನಿಕರಾದ ರವಿಚಂದ್ರ ಬಾಳೆಹೊಸೂರು, ಪರಮೇಶ್ವರ, ಬಸಪ್ಪ ಶೆರೆವಾಡ ಹಾಗೂ ಇತರರ ಜತೆಗೆ ಸುಭಾಷಸಿಂಗ ಜಮಾದಾರ, ಕಿರಣ ಪಾಟೀಲ, ಸಂತೋಷ, ಪ್ರಶಾಂತ ಸುತಾರ, ಡಾ. ನಾಗಲಿಂಗ ಮುರಗಿ, ವಾಸನ್ ಐ ಕೇರ್ ಸಿಬ್ಬಂದಿ, ಉಪಸ್ಥಿತರಿದ್ದರು.
ವಾಯು ವಿಹಾರಿಗಳ ಸಂಘ, ಹುಬ್ಬಳ್ಳಿ ಸೈಕ್ಲಿಂಗ್ ಅಸೋಸಿಯೇಷನ್, ವಿವಿಧ ಸಂಘಟನೆಗಳ ಕಾರ್ಯಕರ್ತರು ಓಟದಲ್ಲಿ ಭಾಗವಹಿಸಿದ್ದರು.