ತಾರೆ ನೀ ಮಿನುಗು ಡಿ. 3ಕ್ಕೆ

NEW PM
Published on

ಹುಬ್ಬಳ್ಳಿ : ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜ್ಯದ ಸಾಧಕರಿಗೆ ಕೆಬಿಜೆ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ‘ತಾರೆ ನೀ ಮಿನುಗು’ ಎಂಬ ಬೃಹತ್ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸೌಂದರ್ಯ ಸ್ಪರ್ಧೆ ಕಾರ್ಯಕ್ರಮವನ್ನು ಡಿಸೆಂಬರ್ 3 ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಕಾರ್ಯದರ್ಶಿ ಮೇಘನಾ ಕೆ.ಸಿ., ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಜನ ಸಾಧಕರನ್ನು ಶೀಘ್ರ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಇದರೊಂದಿಗೆ ಸೌಂದರ್ಯ ಸ್ಪರ್ಧೆ ಸಹ ನಡೆಯಲಿದ್ದು, ಗ್ರಾಮೀಣ ಭಾಗದವರಿಗೆ ಆದ್ಯತೆ ನೀಡಲಾಗುವುದು. ಉಚಿತ ಆಡಿಷನ್ ನಡೆಯಲಿದೆ. ಸೌಂದರ್ಯ ಸ್ಪರ್ಧೆಯಲ್ಲಿ ಒಂದೊಂದು ವಿಭಾಗಕ್ಕೆ 15-20 ಸ್ಪರ್ಧಾಳುಗಳ ಆಯ್ಕೆ ಮಾಡಲಾಗುವುದು. ಫಿನಾಲೆಯಲ್ಲಿ ಪ್ರಮುಖ 10ರ ಗುಂಪಿನಲ್ಲಿ ಆಯ್ಕೆಯಾದ ಸದಸ್ಯರಿಗೆ ನೇರವಾಗಿ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಫಿನಾಲೆಯಲ್ಲಿ ಆಯ್ಕೆಯಾದವರಿಗೆ ವಿವಿಧ ಟಿವಿ ಶೋ, ಧಾರವಾಹಿ ಹಾಗೂ ಚಲನಚಿತ್ರಗಳಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಅ. 28 ರಿಂದ ಆಡಿಷನ್ ಆರಂಭವಾಗಲಿದೆ. ಡಿ. 1ಕ್ಕೆ ಕಾರ್ಯಕ್ರಮ ಮುಗಿಯಲಿದೆ. ತಾರೆ ನೀ ಮಿನುಗು ಕಾರ್ಯಕ್ರಮಕ್ಕೆ ಸಿನೆಮಾ ತಾರೆಯರು, ರಾಜಕೀಯ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net