ತಾರಾಪುರ ಗ್ರಾಮ ಸ್ಥಳಾಂತರಿಸಲು ಮನವಿ

HN 4-3
Published on

ವಿಜಯಪುರ: ತಾರಾಪುರ ಗ್ರಾಮವನ್ನು ಬೇರೆಡೆ ಸ್ಥಳಾಂತರಿಸುವಂತೆ ನಿರಾಶ್ರಿತರ ಹೋರಾಟ ಸಮಿತಿ ವತಿಯಿಂದ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ತಾರಾಪುರ ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷ ಶ್ರೀಮಂತ ದುದ್ದಗಿ ಮಾತನಾಡಿ, ತಾರಾಪುರ ಗ್ರಾಮವು ಪ್ರತಿ ವರ್ಷ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿದ್ದು, ಗ್ರಾಮವನ್ನು ಬೇರೆಡೆ ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ಬಾಧಿತ ಗ್ರಾಮದಲ್ಲಿ ಸರ್ಕಾರದ ನಿಯಮಾವಳಿಯನ್ನು ಮೀರಿ ಕೆಲವರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಎಲ್ಲ ಹಕ್ಕು ಪತ್ರಗಳನ್ನು ರದ್ದುಪಡಿಸಬೇಕು. ಪುನಃ ಸರ್ವೇ ಮಾಡಿ ನಿವೇಶನಗಳ ಸಂಖ್ಯೆ ನಮೂದಿಸಿ ನಿವೇಶನ ಒದಗಿಸುವಂತೆ ಮಾಡಬೇಕು. ಹಿಂದುಳಿದ ವರ್ಗದವರಿಗೆ, ಹರಿಜನರಿಗೆ ಸರಿಯಾದ ರೀತಿಯಲ್ಲಿ ನಿವೇಶನಗಳನ್ನು ಹಂಚಬೇಕು. ಎಲ್ಲರಿಗೆ ಸೂಕ್ತ ನ್ಯಾಯ ಒದಗಿಸದೆ ಇದ್ದಲ್ಲಿ ಸಿಂದಗಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಗುರಪ್ಪ ವಡ್ಡರ, ಷಣ್ಮುಖ ಕಿಣಗಿ, ಶಿವಪುತ್ರ ಲಾಳಸಂಗ, ಮುರಳಿಧರ ಹರಿಜನ, ದೌಲಪ್ಪ ಹರಿಜನ, ಕುಶಪ್ಪ ಹರಿಜನ, ಸಿದ್ದಪ್ಪ ಕುಂಬಾರ, ಮಲ್ಲಿಕಾರ್ಜುನ ವಾಲಿ, ಪುಂಡಲಿಕ ಕುಂಚಿಕೋರ, ಸಂಜಯಕುಮಾರ ವಾಲಿ, ಲಕ್ಷ್ಮ್ಮಣ ವಡ್ಡರ, ಮಲ್ಲಣ್ಣ ವಾಲಿ, ಪುಂಡಲಿಕ ಹರಿಜನ, ಮಹೇಶ ಕುಂಚಿಕೋರ, ದೌಲತ ವಾಲಿಕಾರ, ಬಾಗಣ್ಣ ಕುಂಬಾರ, ಸಂಗಣ್ಣ, ಶರಣಪ್ಪ ಹರಿಜನ, ಬಸಪ್ಪ ಹರಿಜನ, ಬಾಬುರಾವ ಮಾಶಾಳ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net