ತರಳಬಾಳು ಶಾಲೆ ವಾರ್ಷಿಕೋತ್ಸವ, ಕಲೋತ್ಸವ

Published on

ಹುಬ್ಬಳ್ಳಿ: ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಶ್ರೀ ತರಳಬಾಳು ಪೂರ್ವ ಹಾಗೂ ಕಿರಿಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಆರ್.ಕೆ. ಕೊಕಾಟಿ ಪ್ರೌಢಶಾಲೆ ಹಾಗೂ ಐ.ಜಿ. ಹಿರೇಗೌಡರ ಪದವಿಪೂರ್ವ ಕಾಲೇಜು ಇವುಗಳ ಆಶ್ರಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಜ. 3ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಉಣಕಲ್ಲ ತರಳಬಾಳು ಕ್ಯಾಂಪಸ್‌ನಲ್ಲಿ ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಪಿ. ಸುರೇಶ ಉದ್ಘಾಟಿಸುವರು. ಕೊಕಾಟಿ ಪ್ರೌಢಶಾಲೆ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಆರ್.ವಿ. ಪಾಟೀಲ ಅಧ್ಯಕ್ಷತೆ ವಹಿಸುವರು.

ಸಂಜೆ 5ಕ್ಕೆ ನಡೆಯುವ ಪ್ರತಿಭಾ ಪುರಸ್ಕಾರ, ತರಳಬಾಳು ಕಲೋತ್ಸವದ ಅಧ್ಯಕ್ಷತೆಯನ್ನು ಹಿರೇಗೌಡರ ಪಿಯು ಕಾಲೇಜಿನ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹೆಬಸೂರ ವಹಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉದ್ಘಾಟನೆ ನೆರವೇರಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net