ತಾರಕೇಶ್ವರ 15ಕ್ಕೆ ಬಿಡುಗಡೆ

New Pm New
Published on

ಹುಬ್ಬಳ್ಳಿ : ಭಕ್ತಿಪ್ರಧಾನ ‘ತಾರಕೇಶ್ವರ’ ಕನ್ನಡ ಚಲನಚಿತ್ರ ನ. 15ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಿತ್ರ ನಟ ಗಣೇಶ ಕೇಸರಕರ, ತಾರಕೇಶ್ವರ ಚಲನಚಿತ್ರ ನನ್ನ ವೃತ್ತಿಬದುಕಿನ 333ನೇಯದ್ದಾಗಿದೆ ಎಂದರು.

ಪೌರಾಣಿಕ ಚಿತ್ರ ನಿರ್ಮಾಣ ಸುಲಭವಲ್ಲ. ಕನ್ನಡಿಗರಿಗೆ ಹೊಸ ರೀತಿಯ ಸಿನಿಮಾ ನೀಡಬೇಕೆಂಬ ಉದ್ದೇಶದಿಂದ ಈ ಚಿತ್ರ ಮಾಡಿದ್ದಾಗಿ ತಿಳಿಸಿದರು.

ನಿರ್ದೇಶಕ ಬಿ.ಎ. ಪುರುಷೋತ್ತಮ ಓಂಕಾರ ಮಾತನಾಡಿ, ಹಲವಾರು ಭಕ್ತಿಪ್ರಧಾನ ಚಿತ್ರಗಳನ್ನು ನಿರ್ವಿುಸಿದ್ದೇನೆ. ನಾಯಕ ನಟ ಗಣೇಶ ಕೇಸರಕರ ಅವರು ಶಿವ, ಕುರುಡ, ತಾರಕೇಶ್ವರ ಮತ್ತು ಮಹಾರಾಜ ಎಂಬ ನಾಲ್ಕು ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ತಿಳಿಸಿದರು.

ನಾಯಕಿ ನಟಿ ರೂಪಾಲಿ, ಬಾಲನಟಿ ಋತುಸ್ಪರ್ಷ, ಅಮೃತ ಇಜಾರಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net