ತಪ್ತಮುದ್ರಾಧಾರಣೆ 22ರಂದು

Published on

ಹುಬ್ಬಳ್ಳಿ: ಇಲ್ಲಿಯ ಭವಾನಿನಗರದ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಏ. 22ರಂದು ಬೆಳಗ್ಗೆ 8ಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದ ಪೀಠಾಧೀಪತಿ 1008 ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ತಪ್ತಮುದ್ರಾಧಾರಣೆ ನಡೆಯಲಿದೆ.

ಏ. 23ರಂದು ಬೆಳಗ್ಗೆ 11ಕ್ಕೆ ಮಂತ್ರಾಲಯ ಶ್ರೀಪಾದಂಗಳವರು ಹಾಗೂ ಸೋದೆ ಶ್ರೀವಾದಿರಾಜಸ್ವಾಮಿಗಳ ಮಠದ ಶ್ರೀಪಾದಂಗಳವರು ಸಂಸ್ಥಾನ ಪೂಜೆಯನ್ನು ನೆರವೇರಿಸುವರು.

ಈ ಹಿನ್ನೆಲೆಯಲ್ಲಿ ಶ್ರೀಮಠದ ಶಿಷ್ಯರು ಮತ್ತು ಭಕ್ತರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಮಠದ ವಿಚಾರಣಾಕರ್ತ ಎ.ಸಿ. ಗೋಪಾಲ ಹಾಗೂ ವ್ಯವಸ್ಥಾಪಕ ಜೆ. ವೇಣುಗೋಪಾಲಾಚಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net