

ಪ್ರಶಾಂತ ಭಾಗ್ವತ ಉಡುಪಿ
ಆಸ್ತಿಕರೆಲ್ಲರೂ ದೇವರನ್ನು ಆರಾಧಿಸಲು ವಿವಿಧ ಬಗೆ, ಸಂಪ್ರದಾಯ ಅಥವಾ ಆಚರಣೆ ರೂಢಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಭಗವಾನ್ ವಿಷ್ಣುವಿನ ಆರಾಧಕರೂ ಸಹ ವಿಶಿಷ್ಟವಾಗಿ ಮುದ್ರಾ ಧಾರಣೆ ಮೂಲಕ ದೇವರ ಸಂಪ್ರೀತಿ ಗಳಿಸುವ ಕಾರ್ಯ ಮಾಡುತ್ತಾರೆ.
ಮುಖ್ಯವಾಗಿ ಮಾಧ್ವ ಸಂಪ್ರದಾಯ ಅನುಸರಿಸುವ ಎಲ್ಲರೂ ಸಹ ಮುದ್ರಾ ಧಾರಣೆ ಮಾಡುತ್ತಾರೆ. ಆ ನಿಟ್ಟಿನಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲೂ ಸಹ ವರ್ಷಕ್ಕೊಮ್ಮೆ ತಪ್ತ ಮುದ್ರಾ ಧಾರಣೆಯ ವಿಶಿಷ್ಟ ಆಚರಣೆ ನಡೆಯಲಿದ್ದು, ಈ ಬಾರಿ ಜುಲೈ 6ರಂದು ಮಠದ ಭೋಜನ ಶಾಲೆಯಲ್ಲಿ ಸಾಂಪ್ರದಾಯ ನಡೆಯಲಿದೆ.
ಎಲ್ಲ ಭಕ್ತರೂ ಸಹ ತಪ್ತ ಮುದ್ರಾ ಧಾರಣೆ ಸ್ವೀಕರಿಸಿ ಧನ್ಯರಾಗಬೇಕು, ಈ ಕಾರ್ಯದಿಂದ ಪ್ರತಿಯೊಬ್ಬರಿಗೂ ಭಗವಂತನ ಭಕ್ತಿಯ ವಿಶೇಷವಾದ ಅರ್ಹತೆ ಬರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಯಾರೆಲ್ಲ ಧಾರಣೆ ಮಾಡುತ್ತಾರೋ ಅವರನ್ನೆಲ್ಲ ದೇವತೆಗಳು ವಿಷ್ಣು ಭಕ್ತರೆಂದು ಪರಿಗಣಿಸುತ್ತಾರೆ. ಏಕಾದಶಿಯ ಈ ಪರ್ವ ಕಾಲದಲ್ಲಿ ಮುದ್ರೆ ಧಾರಣೆ ಮಾಡಿಕೊಂಡು ಉಡುಪಿ ಕೃಷ್ಣನ ವಿಶೇಷ ಕೃಪೆಗೆ ಪಾತ್ರರಾಗಬೇಕು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ