ತಪ್ತ ಮುದ್ರಾ ಧಾರಣ

Tapta mudra Dharana
Published on

ಬೆಂಗಳೂರು: ಪ್ರಥಮ ಏಕಾದಶಿ ಪ್ರಯುಕ್ತ ಬೆಂಗಳೂರಿನ ವಿವಿಧ ಮಠಗಳಲ್ಲಿ ಜು. 17ರಂದು ತಪ್ತ ಮುದ್ರಾ ಧಾರಣ ನಡೆಯಲಿದೆ.

ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ 1008 ಶ್ರೀ ಡಾ. ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆ ನೆರವೇರಿಸಿ, ಸುದರ್ಶನ ಹೋಮದೊಂದಿಗೆ ತಾವು ತಪ್ತ ಮುದ್ರ ಧಾರಣೆ ಸ್ವೀಕರಿಸಲಿದ್ದಾರೆ. ನಂತರ ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಲಿದ್ದಾರೆ.

ಶ್ರೀಮಠದ ಭಕ್ತರಿಗೆ ಅಂದು ಬೆಳಗ್ಗೆ 7.30ರಿಂದ ರಾತ್ರಿ 9.30ರವರೆಗೆ ನಿರಂತರವಾಗಿ ಮುದ್ರಾ ಧಾರಣ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರಿಂದ ಉಪನ್ಯಾಸ ಮಾಲಿಕೆ ನೆರವೇರಲಿದೆ ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕ ಆರ್.ಕೆ. ವಾದಿಂದ್ರ ಆಚಾರ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net