ತಪ್ತ ಮುದ್ರಾಧಾರಣೆಯಿಂದ ಆರೋಗ್ಯ ವೃದ್ಧಿ

29 MANVI 02
ಮಾನ್ವಿ ರಾಘವೇಂದ್ರ ಮಠದಲ್ಲಿ ಸುಬುಧೇಂದ್ರ ತೀರ್ಥರಿಂದ ಶಾಸಕ ಹಂಪಯ್ಯನಾಯಕ ಆಶೀರ್ವಾದ ಪಡೆದುಕೊಂಡರು. ಮಾನ್ವಿ ಪಟ್ಟಣ ಬ್ಯಾಂಕ್ ಅಧ್ಯಕ್ಷ ಆರ್. ತಿಮ್ಮಯ್ಯ ಶೆಟ್ಟಿ, ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಮುದ್ದುರಂಗರಾವ್ ಮುತಾಲಿಕ್ ಇನ್ನಿತರರಿದ್ದರು..
Published on

ಮಾನ್ವಿ: ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ಚಾತುರ್ಮಾಸ್ಯದ ಪ್ರಯುಕ್ತ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು.

ಚಾತುರ್ಮಾಸ್ಯದಲ್ಲಿ ತಪ್ತ ಮುದ್ರಾಧಾರಣೆ ಮಾಡಿಕೊಳ್ಳುವುದರಿಂದ ಇಷ್ಟಾರ್ಥಗಳು ಈಡೇರಲಿವೆ. ಅಲ್ಲದೆ ಆರೋಗ್ಯವೃದ್ಧಿಯಾಗುತ್ತದೆ ಎಂದು ತಿಳಿಸಿದರು. ನಂತರ ಮುದ್ರಾಧಾರಣೆಯ ಮಹತ್ವದ ಕುರಿತು ತಿಳಿಸಿದರು.

ಸುಬುಧೇಂದ್ರ ತೀರ್ಥರಿಂದ ಶಾಸಕ ಹಂಪಯ್ಯ ನಾಯಕ ಆಶೀರ್ವಾದ ಪಡೆದುಕೊಂಡರು. ಮಾನ್ವಿ ಪಟ್ಟಣ ಬ್ಯಾಂಕ್ ಅಧ್ಯಕ್ಷ ಆರ್.ತಿಮ್ಮಯ್ಯ ಶೆಟ್ಟಿ, ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಮುದ್ದುರಂಗರಾವ್ ಮುತಾಲಿಕ್ ಇನ್ನಿತರರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net