

ಮೂಡಿಗೆರೆ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಪ್ರಸಕ್ತ ಸಾಲಿನಲ್ಲಿ 11.52 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ವಿ.ಕೆ.ಶಿವೇಗೌಡ ತಿಳಿಸಿದರು.
ಗುರುವಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಈ ವರ್ಷ ರೈತ ಭವನದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ನಡೆದಿದೆ. ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಹಿಂದೆ ರೈತ ಭವನದಲ್ಲಿ ನಡೆದಿರುವ ಕಾಮಗಾರಿಯಲ್ಲಿ ಲೋಪವಾಗಿರುವ ಕುರಿತು ತನಿಖಾ ವರದಿ ಮಂಡನೆ ವಿಳಂಬವಾಗಿರುವ ಬಗ್ಗೆ ಸಭೆಯಲ್ಲಿ ಭಾರಿ ಚರ್ಚೆ ನಡೆಯಿತು.
ಸಹಕಾರಿ ಧುರೀಣ ಒ.ಎಸ್.ಗೋಪಾಲ ಗೌಡ ದಂಪತಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಪಪಂ ಅಧ್ಯಕ್ಷೆ ಗೀತಾ ರಂಜನ್ ಅಜಿತ್‌ಕುಮಾರ್, ಹಳೇ ಮೂಡಿಗೆರೆ ಗ್ರಾಪಂ ಅಧ್ಯಕ್ಷೆ ರಂಜಿತಾ ಸೇರಿದಂತೆ ಸಂಘದಲ್ಲಿ ಹೆಚ್ಚು ವ್ಯವಹಾರ ನಡೆಸಿದ ಸದಸ್ಯರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಟಿಎಪಿಸಿಎಂಎಸ್ ಉಪಾಧ್ಯಕ್ಷ ಎಚ್.ಜಿ.ಉತ್ತಮಕುಮಾರ್, ನಿರ್ದೇಶಕರಾದ ಬಿ.ಎನ್.ಜಯಂತ್, ಒ.ಜಿ.ರವಿ, ಎಂ.ವಿ.ಜಗದೀಶ್, ರಂಜನ್ ಅಜಿತ್‌ಕುಮಾರ್, ಎಂ.ಎಲ್.ಅಭಿಜಿತ್, ಎಚ್.ಜೆ.ಸಂದರ್ಶ, ಎಂ.ಕೆ.ಚಂದ್ರೇಶ್, ಪಿ.ಕೆ.ನಾಗೇಶ್, ಯು.ಎಚ್. ಹೇಮಶೇಖರ್, ಕೆ.ಪಿ.ಭಾರತಿ, ವ್ಯವಸ್ಥಾಪಕ ವಿವೇಕ್ ಇತರರಿದ್ದರು.