ಬಂಗಾರಪೇಟೆ:ಟಿಎಪಿಸಿಎಂಎಸ್‌ನ ಎ ವರ್ಗದ 5 ಸ್ಥಾನಗಳಿಗೆ ಹಾಗೂ ಬಿ ವರ್ಗದ 8 ಸ್ಥಾನಗಳಿಗೆ ಭಾನುವಾರ ಬೆಳಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ಪಟ್ಟಣದ ಕನ್ನಡ ವಾದರಿ ಶಾಲೆಯ ಆವರಣದಲ್ಲಿ ಚುನಾವಣೆ ನಿಗದಿಯಾಗಿದ್ದು, ಸಂಜೆ 4ಗಂಟೆ ನಂತರ ಮತ ಎಣಿಕೆ ನಡೆದು, ಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಬಾಲಕೃಷ್ಣ್ಣಪ್ಪ ತಿಳಿಸಿದ್ದಾರೆ.
ಸಹಕಾರ ಸಂಗಳ ಕ್ಷೇತ್ರದಲ್ಲಿ ಒಟ್ಟು ನಾಲ್ಕು ಸ್ಥಾನಗಳಿದ್ದು, ಇದರಲ್ಲಿ ಮತ ಚಲಾಯಿಸಲು 13 ಡೆಲಿಗೇಟ್ ಮತದಾರರು ಅರ್ಹರಾಗಿದ್ದಾರೆ. ಈ ನಾಲ್ಕು ಕ್ಷೇತ್ರಗಳಿಗೆ ಐವರು ಅಭ್ಯರ್ಥಿಗಳು ಕಣದಲ್ಲಿದ್ದು, ನಾಲ್ವರು ಚುನಾಯಿತರಾಗಲಿದ್ದಾರೆ. ಬಿ ವರ್ಗದ 8 ಸ್ಥಾನಗಳಿಗೆ ಮತ ಚಲಾಯಿಸಲು 2,390 ಮತದಾರರಿದ್ದಾರೆ. 8 ಸ್ಥಾನಗಳಿಗೆ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿರುವ ವಾದರಿ ಶಾಲೆ ಕಟ್ಟಡದಲ್ಲಿ ಮತದಾನ ನಡೆಯಲಿದೆ. ಮತದಾನ ವಾಡಲು ಈ ವರ್ಗಕ್ಕೆ ಒಂದು ಕೊಠಡಿ ಹಾಗೂ ಬಿ ವರ್ಗದ ಮತದಾರರು ಮತದಾನ ವಾಡಲು ಎಂಟು ಕೊಠಡಿಯಲ್ಲಿ ವ್ಯವಸ್ಥೆ ವಾಡಲಾಗಿದೆ ಎಂದು ತಿಳಿಸಿದರು.