

ಲಿಂಗಸುಗೂರು: ಜನರಿಗಿಂತ ಜಾನುವಾರುಗಳ ಸೇವೆ ಮಾಡುವುದು ಮೌಲ್ಯಯುತ ಕಾಯಕ ಎಂದು ತಾಪಂ ಇಒ ಅಮರೇಶ ಯಾದವ್ ಹೇಳಿದರು.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಪಶು ಸಖಿಯರಿಗೆ ಏರ್ಪಡಿಸಿದ್ದ ಪ್ರಾಥಮಿಕ ಹಂತದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಪಶು ಸಂಗೋಪನೆ ರೈತರ ಜೀವನಾಧಾರವಾಗಿದ್ದು, ಕೃಷಿ ಜತೆಗೆ ಹಸು ಸಾಕಣೆಯಿಂದ ರೈತರ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ಪ್ರಭು, ಜಾನುವಾರು ತಳಿಗಳ ಮಾಹಿತಿ ನೀಡಿದರು. ಡಾ.ಪ್ರಶಾಂತ, ಪ್ರಥಮ ಚಿಕಿತ್ಸೆ ಕುರಿತು ವಿವರಿಸಿದರು. ಡಾ.ದೇವರಾಜ, ಜಾನುವಾರುಗಳ ಸಂರಕ್ಷಣಾ ವಿಧಾನಗಳ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ಪಶು ಸಖಿಯರಿಗೆ ಮಾಹಿತಿ ಪುಸ್ತಕ ಮತ್ತು ಪ್ರಥಮ ಚಿಕಿತ್ಸೆ ಕಿಟ್ ವಿತರಿಸಲಾಯಿತು.
ಪಶು ಆಸ್ಪತ್ರೆ ಅಧಿಕಾರಿ ಡಾ.ರಾಚಪ್ಪ, ತಾಪಂ ಸಹಾಯಕ ನಿರ್ದೇಶಕ ಮಂಜುನಾಥ, ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ, ಸಂಯೋಜನಾಧಿಕಾರಿ ಈರಪ್ಪ, ಡಾ.ಮಹೇಶ, ಡಾ.ಅಶ್ವಘೋಷ್, ಡಾ.ಶಿವರಾಜ, ಡಾ.ಅಭಿಜಿತ್ ಇತರರಿದ್ದರು.