ತನ್ವಿಗೆ ಒಲಿದ ಚಿನ್ನ, ಕಂಚು ಪದಕ

28npn1
??????????????
Published on

ನಿಪ್ಪಾಣಿ: ಬೆಂಗಳೂರಿನ ಕೋರಮಂಗಲ ಇನ್‌ಡೋರ್ ಸ್ಟೇಡಿಯಂನಲ್ಲಿ ಈಚೆಗೆ ಜರುಗಿದ ಮುಕ್ತ ರಾಜ್ಯ ಟೈಕ್ವಾಂಡೋ ಚಾಂಪಿಯನ್‌ಶಿಪ್- 2025ರ ಸ್ಪರ್ಧೆಯಲ್ಲಿ ಸ್ಥಳೀಯ ವಿಎಸ್‌ಎಂ ಸಿಬಿಎಸ್‌ಇ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ತನ್ವಿ ರಾಜಾರಾಮ ಧನಾನಂದ ಉತ್ತಮ ಸಾಧನೆ ತೋರಿದ್ದಾರೆ.

ಪೂಮಸೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕ್ಯೊರುಗಿ ವಿಭಾಗದಲ್ಲಿ ಕಂಚಿನ ಪದಕ ಪಡೆದ ವಿದ್ಯಾರ್ಥಿನಿಯನ್ನು ವಿದ್ಯಾಸಂವರ್ಧಕ ಮಂಡಳದ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ಆಡಳಿತ ಮಂಡಳಿ ಸದಸ್ಯರು ಸತ್ಕರಿಸಿದರು.

ವೈಸ್-ಚೇರ್ಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ವಿಎಸ್‌ಎಂ ಸಿಬಿಎಸ್‌ಇ ಶಾಲೆಯ ಉಸ್ತುವಾರಿ ಸಮಿತಿ ಅಧ್ಯಕ್ಷ ಸಚಿನ ಹಾಲಪ್ಪನವರ, ಸದಸ್ಯ ಆನಂದ ಗಿಂಡೆ, ರುದ್ರಕುಮಾರ ಕೋಠಿವಾಲೆ, ಸಿಇಒ ಡಾ. ಸಿದ್ಧಗೌಡ ಪಾಟೀಲ, ಪ್ರಾಚಾರ್ಯೆ ಲಿಲಿಯನ್ ಶಾನ್, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net