

ಪುತ್ತೂರು ಗ್ರಾಮಾಂತರ: ಕೋಲಾರದದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 17ರ ವಯೋಮಾನದೊಳಗಿನ ಬಾಲಕಿಯರ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ಬಡಗನ್ನೂರು ಪಟ್ಟೆ ಪ್ರತಿಭಾ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ತನುಶ್ರೀ ರೈ ಬಡಕಾಯೂರು 11.87 ಮೀ. ದೂರ ಗುಂಡೆಸೆದು ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ 11.55 ಮೀ, ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 11.44 ಮೀ. ದೂರ ಎಸೆದು ಹೊಸ ಕೂಟ ದಾಖಲೆ ಮಾಡಿದ್ದರು. ಬಡಕಾಯೂರು ನಿವಾಸಿ ಗಂಗಾಧರ ರೈ ಮತ್ತು ಯಶೋದಾ ಜಿ.ರೈ ದಂಪತಿ ಪುತ್ರಿ. ಪ್ರತಿಭಾ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ. ತರಬೇತಿ ನೀಡಿದ್ದರು.