

ನಾಪೋಕ್ಲು: ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪಿ.ಯು.ತನುಷ್ ಜಾರ್ಕಂಡ್ ನಲ್ಲಿ ನಡೆಯಲಿರುವ 19 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜ. 29ರಿಂದ ಫೆ. 2ರವರೆಗೆ ಹಾಕಿ ಕ್ರೀಡಾಕೂಟ ನಡೆಯಲಿದೆ.
ಇವರು ಕೂಡಿಗೆಯ ಹಾಕಿ ತರಬೇತುದಾರಾಗಿರುವ ಬಿ.ಎಸ್.ವೆಂಕಟೇಶ್ ಅವರಲ್ಲಿ ತರಬೇತಿ ಪಡೆದಿದ್ದಾರೆ. ಇವರು ಕಕ್ಕಬ್ಬೆ ಕುಂಜಿಲ ಗ್ರಾಮದ ಪೊಂಗೇರ ಉಲ್ಲಾಸ ಮತ್ತು ಹೇಮಾ ದಂಪತಿ ಪುತ್ರ.