ತಂತ್ರಾಡಿ ರಮೇಶ ನಾಯ್ಕಗೆ ಪಿಎಚ್.ಡಿ

ramesh
ತಂತ್ರಾಡಿಯ ರಮೇಶ ನಾಯ್ಕ
Published on

ಕೊಕ್ಕರ್ಣೆ: ಮಂದಾರ್ತಿ ಸಮೀಪದ ತಂತ್ರಾಡಿಯ ರಮೇಶ ನಾಯ್ಕ ಅವರಿಗೆ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಪ್ ಸೋಶಿಯಲ್ ಸೈನ್ಸ್‌ನಲ್ಲಿ ನಡೆದ 84ನೇ ಘಟಿಕೋತ್ಸವದಲ್ಲಿ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಯಿತು. ‘ಗ್ರಾಮೀಣ ಅಭಿವೃದ್ಧಿ ಕುರಿತಾದ ಬರ ಪೀಡಿತ ಪ್ರದೇಶದಲ್ಲಿ ರೈತರ ಸ್ಥಿತಿಸ್ಥಾಪಕತ್ವ’ ಎಂಬ ಮಹಾಪ್ರಬಂಧಕ್ಕೆ ಪದವಿ ಲಭಿಸಿದೆ.

ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ನಡೆಸಲಾದ ಈ ಅಧ್ಯಯನಕ್ಕೆ ಭಾರತದ ಪ್ರತಿಷ್ಠಿತ ಸಂಸ್ಥೆಯಾದ ಟಾಟಾ ಇನ್‌ಸ್ಟಿಟ್ಯೂಟ್ ಆಪ್ ಸೋಶಿಯಲ್ ಸೈನ್ಸ್ ತುಳಜಾಪುರ ಕ್ಯಾಂಪಸ್‌ನಲ್ಲಿ ಉಪ ನಿರ್ದೇಶಕ ಮತ್ತು ಪ್ರಾಧ್ಯಾಪಕ ಪ್ರೊ.ರಮೇಶ ಜಾರೆ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಇವರು ಕುಡುಬಿ ಸಮಾಜದ ಪ್ರಥಮ ಪಿಎಚ್.ಡಿ ಪದವಿದರರಾಗಿದ್ದು, ತಂತ್ರಾಡಿ ಮಂದಾರ್ತಿ ಪುಟ್ಟಯ್ಯ ನಾಯ್ಕ ಹಾಗೂ ಗಿರಿಜಾ ದಂಪತಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net