ಟಂಟಂ ನಿಲ್ದಾಣವಾದ ರಬಕವಿ ಹೊಸ ಬಸ್ ನಿಲ್ದಾಣ

rbk 16-1 bus stop
ರಬಕವಿ ಹೊಸ್ ಬಸ್ ನಿಲ್ದಾಣದಲ್ಲಿ ಟಂಟಂಗಳು ಜನರನ್ನು ಕರೆದುಕೊಂಡು ಹೋಗುತ್ತಿರುವುದು.
Published on

ರಬಕವಿ/ಬನಹಟ್ಟಿ : ರಬಕವಿಯಲ್ಲಿ ನಿರ್ಮಿಸಲಾಗಿರುವ ಹೊಸ ಬಸ್ ನಿಲ್ದಾಣದಲ್ಲಿ ಟಂಟಂ ಹಾಗೂ ಆಟೋಗಳು ರಾಜಾರೋಷವಾಗಿ ಪ್ರವೇಶಿಸಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದು, ಸದ್ಯ ಈ ಬಸ್ ನಿಲ್ದಾಣ ಟಂಟಂ ನಿಲ್ದಾಣವಾಗಿ ಪರಿಣಮಿಸಿದೆ.

ಬಸ್‌ಗಳು ವೇಗವಾಗಿ ನಿಲ್ದಾಣಕ್ಕೆ ಆಗಮಿಸಿ ಮರಳಿ ಹೋಗುವಾಗ ಈ ಆಟೋಗಳೂ ನಿಂತಿರುತ್ತವೆ. ಟಂಟಂ ಚಾಲಕರು ತೇರದಾಳ, ಹಾರೂಗೇರಿ ಕ್ರಾಸ್, ಮಹಾಲಿಂಗಪುರ, ಚಿಮ್ಮಡ ಎಂದು ಕೂಗಿ ಜನರನ್ನು ಹತ್ತಿಸಿಕೊಂಡು ಹೋಗುತ್ತಿದ್ದಾರೆ. ಬಸ್‌ಗಳು ತುಂಬಿ ಹೋಗುತ್ತಿದ್ದ ಸನ್ನಿವೇಷಗಳನ್ನು ನೋಡಿ ನಿಲ್ದಾಣದೊಳಗೆ ಬಂದು ಉಳಿದವರನ್ನು ಟಂಟಂಗಳಲ್ಲಿ ತುಂಬಿಸಿಕೊಂಡು ತೆರಳುತ್ತಿದ್ದಾರೆ.

ಟಂಟಂಗಳು ನಿಲ್ದಾಣದೊಳಗೆ ಬಂದು ಜನರನ್ನು ಹತ್ತಿಸಿಕೊಂಡು ಹೋಗುವುದು ಸರಿಯಾದ ಕ್ರಮವಲ್ಲ. ಬಸ್‌ಗಳು ಓಡಾಡೋ ಸ್ಥಳ, ಬಸ್‌ಗಳು ಹಿಂದೆ ಬರುವಾಗ ಏನಾದರೂ ಅನಾಹುತಗಳಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿಸಿದವರು ಇಲ್ಲಿನ ವ್ಯವಸ್ಥೆ ಸರಿಪಡಿಸಬೇಕೆಂದು ಚಂದ್ರಶೇಖರ ಬಯ್ಯರ ಆಗ್ರಹಿಸಿದ್ದಾರೆ.

ರಬಕವಿ ಬಸ್ ನಿಲ್ದಾಣದಲ್ಲಿ ಟಂಟಂಗಳು ಜನರನ್ನು ಹತ್ತಿಸಿಕೊಂಡು ಹೋಗುವ ವಿಷಯ ಗಮನಕ್ಕೆ ಬಂದಿಲ್ಲ. ತಕ್ಷಣ ಅಲ್ಲಿರುವ ಸಾರಿಗೆ ನಿಯಂತ್ರಕರಿಂದ ವಿಷಯ ಸಂಗ್ರಹಿಸಿ ಖಾಸಗಿ ವಾಹನಗಳು ನಿಲ್ದಾಣದೊಳಗೆ ಬರದಂತೆ ಕ್ರಮ ಜರುಗಿಸಲಾಗುತ್ತಿದೆ.
ಬಿ.ಟಿ. ಗಸ್ತಿ. ಡಿಪೋ ಮ್ಯಾನೇಜರ್, ಕೆಎಸ್‌ಆರ್‌ಟಿಸಿ ಜಮಖಂಡಿ.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net