

ಮಡಿಕೇರಿ:
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದ ಮಡಿಕೇರಿ ಮೂಲದ ವಿದ್ಯಾರ್ಥಿ ತನ್ಮಯ್ ಇದೀಗ ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ. ನಿರಂಜನ್ ಮತ್ತು ಸೌಮ್ಯ ದಂಪತಿಯ ಪುತ್ರ ತನ್ಮಯ್ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲಾದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 622 ಅಂಕಗಳಿಸಿದ್ದ. ಈ ಅಂಕಗಳಿAದ ತೃಪ್ತರಾಗದ ತನ್ಮಯ್ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದನು.
ಇದೀಗ ಮರುಮೌಲ್ಯಮಾಪನದಲ್ಲಿ ತನ್ಮಯ್ ಗೆ 625 ಕ್ಕೆ 625 ಪೂರ್ಣ ಅಂಕಗಳು ಲಭಿಸಿದೆ. ಇದರಿಂದಾಗಿ ತನ್ಮಯ್ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಂತಾಗಿದೆ. ತನ್ಮಯ್ ಅಣ್ಣ ವಿಹಾನ್ ಕೂಡ ಮೈಸೂರು ಶ್ರೀ ರಾಮಕೃಷ್ಣ ವಿದ್ಯಾಶಾಲಾದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ 623 ಅಂಕಗಳಿಸಿದ್ದು ಪ್ರಸ್ತುತ ಜೋಧ್‌ಪುರ್ ರಾಷ್ಟಿçÃಯ ಕಾನೂನು ವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ.