ಬಂದೂರಿಗೆ ಟ್ಯಾಂಕರ್ ನೀರು

13HSN2
Published on

ಹಾಸನ: ಅರಸೀಕೆರೆ ತಾಲೂಕು ಬಂದೂರು ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಶಾಸಕ ಕೆ.ಎಸ್. ಲಿಂಗೇಶ್ ಹೇಳಿದರು.

ಕಲುಷಿತ ನೀರು ಸೇವಿಸಿ ಶನಿವಾರ 10ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಯೋಗಕ್ಷೇಮ ವಿಚಾರಿಸಿ ಮಾತನಾಡಿದರು.
ಪಿಡಿಒ ಹಾಗೂ ವಾಟರ್‌ಮನ್ ಬೇಜವಾಬ್ದಾರಿಯಿಂದ ಅಚಾತುರ್ಯ ಸಂಭವಿಸಿದೆ. ಸದ್ಯಕ್ಕೆ ಭೋವಿ ಕಾಲನಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಹಳೆಯ ನೀರಿನ ಟ್ಯಾಂಕ್ ಅನ್ನು ನೆಲಸಮಗೊಳಿಸಿ ನೂತನ ನೀರಿನ ಟ್ಯಾಂಕ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಶೇಖರ್ ಮಾತನಾಡಿ, ಗ್ರಾಮದ ರಸ್ತೆ ಹಾಗೂ ಚರಂಡಿ ಹಾಳಾಗಿದ್ದು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅರಸೀಕೆರೆ ತಹಸೀಲ್ದಾರ್ ಸಂತೋಷ್‌ಕುಮಾರ್, ವೈದ್ಯಾಧಿಕಾರಿ ದೀಪಕ್, ತಾಪಂ ಇಒ ನಟರಾಜ್, ಗ್ರಾಪಂ ಸದಸ್ಯ ಮಹೇಶ್, ಪಿಡಿಒ ಜೈಸಿಂಹ, ಪಿಎಸ್‌ಐ ಅರುಣ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net