ವಿಷಯುಕ್ತ ರಾಸಾಯನಿಕ ಸುರಿಯುತ್ತಿದ್ದ ಟ್ಯಾಂಕರ್​ ಜಪ್ತಿ

21 06 2025_BNG_RURAL_PAGE_5
ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಸತ್ಯವಾರ ಅರಣ್ಯ ಪ್ರದೇಶದಲ್ಲಿ ವಿಷಯುಕ್ತ ರಾಸಾಯನಿಕ ಸುರಿಯುತ್ತಿದ್ದ ಟ್ಯಾಂಕರ್​ಅನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
Published on

ಹೊಸಕೋಟೆ : ತಾಲೂಕಿನ ಸೂಲಿಬೆಲೆ ಹೋಬಳಿ ಸತ್ಯವಾರ ಎಸ್​ಟಿಆರ್​ಆರ್​ ಬಳಿಯ ಅರಣ್ಯ ಪ್ರದೇಶದಲ್ಲಿ ದ್ರವ ರೂಪದ ರಾಸಾಯನಿಕ ಸುರಿಯುತ್ತಿದ್ದ ಟ್ಯಾಂಕರ್​ಅನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಸೂಲಿಬೆಲೆ ಹೋಬಳಿ ಸತ್ಯವಾರ ಎಸ್​ಟಿಆರ್​ಆರ್​ ಬಳಿಯ ಅರಣ್ಯ ಪ್ರದೇಶದಲ್ಲಿ ಅಪರಿಚಿತರು ಶುಕ್ರವಾರ ದ್ರವ ರೂಪದ ರಾಸಾಯನಿಕವನ್ನು ಟ್ಯಾಂಕರ್​ ಮೂಲಕ ಸುರಿಯುತ್ತಿದ್ದರು.

ಇದೇ ವೇಳೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋಗಿ, ರಾಸಾಯನಿಕ ಸುರಿಯುವುದನ್ನು ತಡೆದು, ಲಾರಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ವಲಯ ಅರಣ್ಯಾಧಿಕಾರಿ ವರುಣ್​ ಕುಮಾರ್​ ಮಾತನಾಡಿ, ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ರಾಸಾಯನಿಕ ದುಷ್ಪರಿಣಾಮ ಬೀರಲಿದ್ದು, ಇದರ ಶ್ಯಾಂಪಲ್​ ಸಂಗ್ರಹಿಸಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ವರದಿ ಬಳಿಕ ಕ್ರಮವಹಿಸಲಾಗುವುದು ಎಂದರು. ಸದ್ಯ ಜಪ್ತಿ ಮಾಡಲಾದ ಟ್ಯಾಂಕರ್​ಅನ್ನು ಸೂಲಿಬೆಲೆ ಠಾಣಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net