ಗೋಕರ್ಣ:ಹಿರೇಗುತ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಟ್ಯಾಂಕರ್ ಬಡಿದು ಪಾದಾಚಾರಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ..ನಿವೃತ್ತ ಶಿಕ್ಷಕ ಹಿರೇಗುತ್ತಿಯ ವಿಠೋಬ ನಾರಾಯಣ ನಾಯಕ(82) ಮೃತರು..ಟ್ಯಾಂಕರ್ ಬಡಿದು ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಒಯುತ್ತಿರುವ ವೇಳೆ ಸಾವನ್ನಪ್ಪಿದರು.ಗೋಕರ್ಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.