ರಾಷ್ಟ್ರ ಮಟ್ಟಕ್ಕೆ ತಾನಿಯಾ ಆಯ್ಕೆ

Published on

ಸೋಮವಾರಪೇಟೆ: ಜಿಲ್ಲೆಯ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿನಿ ಎಂ.ಎಂ.ತಾನಿಯಾ, ಡಿ.9ರಿಂದ ಮಧ್ಯಪ್ರದೇಶದಲ್ಲಿ ಆಯೋಜನೆಗೊಂಡಿರುವ 68ನೇ ರಾಷ್ಟ್ರಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಕೆಪಿಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಸೋಮವಾರಪೇಟೆ ಚೌಡ್ಲು ಗ್ರಾಮ ನಿವಾಸಿ ಮೊಹಮ್ಮದ್ ಅಸ್ಲಾಂ ಹಾಗೂ ಅಸ್ಮಾ ಬಾನು ದಂಪತಿ ಪುತ್ರಿ. ಈಕೆಗೆ ಕುಪ್ಪಂಡ ಸುಬ್ಬಯ್ಯ, ಮೂಕಳಮಾಡ ಗಣಪತಿ ಅವರು ಹಾಕಿ ತರಬೇತಿ ನೀಡಿದ್ದು, ಡ್ಯಾನಿ ಈರಪ್ಪ ಅವರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ.

ತಾನಿಯಾ
ತಾನಿಯಾ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net