

ಬೆಟ್ಟದಪುರ: ಸಮೀಪದ ತಂದ್ರೆಗುಡಿಕೊಪ್ಪಲು ಗ್ರಾಮದಲ್ಲಿ ತಂದ್ರೆಯಮ್ಮ(ಸಿಡಿಯಮ್ಮ) ಉತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಅತ್ತಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿರುವ ತಂದ್ರೆಯಮ್ಮ ದೇವರ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕಾರಗೊಂಡ ಬಂಡಿಯಲ್ಲಿ ಪ್ರತಿಸ್ಥಾಪಿಸಿ ಪೂಜೆ ಸಲ್ಲಿಸಿದ ಬಳಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ತಂದ್ರೆಗುಡಿಕೊಪ್ಪಲು ಗ್ರಾಮಕ್ಕೆ ತೆರಳಿ ಅಲ್ಲಿನ ತಂದ್ರೆಯಮ್ಮ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.
ವಿವಿಧ ವರಗಳನ್ನು ಕರುಣಿಸುವಂತೆ ದೇವಿಗೆ ಹರಕೆ ಮಾಡಿಕೊಂಡ ಭಕ್ತರು ಹರಕೆ ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಜಾತ್ರೆ ಬಳಿಕ ಉತ್ಸವ ಮೂರ್ತಿಯನ್ನು ಮೂಲಸ್ಥಾನಕ್ಕೆ ತಂದು ಸಂಪ್ರದಾಯದಂತೆ ಇರಿಸಲಾಯಿತು.