

ಬೆಳಗಾವಿ: ಹಿಂದು ದೇವತೆಗಳನ್ನು ಅವಮಾನಿಸಿದ ತಾಂಡವ ಚಲನಚಿತ್ರ ನಿಷೇಧಿಸುವಂತೆ ಒತ್ತಾಯಿಸಿ ‘ಹಮಾರೇ ದೇಶ್ ಸಂಘಟನೆ’ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಸ್ಥಳೀಯ ಆಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಭಾರತದಲ್ಲಿ ಹಿಂದು ದೇವತೆಗಳನ್ನು ಅಮಾನಿಸುವ ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವುದು ದುರದೃಷ್ಟಕರ. ಇತ್ತೀಚೆಗೆ ನಿರ್ಮಾಣ ಮಾಡಲಾದ ತಾಂಡವ ಚಿತ್ರದಲ್ಲಿ ಹಿಂದು ದೇವತೆ ಗಳನ್ನು ಅವಮಾನಿಸಲಾಗಿದೆ. ಚಿತ್ರಕ್ಕೆ ವಿರೋಧ ವ್ಯಕ್ತವಾದ ಕೂಡಲೇ ಚಿತ್ರದಲ್ಲಿನ ತುಣುಕು ಕತ್ತರಿಸಲಾಗಿದೆ.
ಆದ್ದರಿಂದ ಈ ರೀತಿಯ ಹಿಂದು ದೇವತೆಗಳು ಹಾಗೂ ಹಿಂದುಗಳನ್ನು ಅವಮಾನಿಸುವ ಚಿತ್ರ, ಶೋ, ಧಾರವಾಹಿ ಸೇರಿ ಯಾವುದೇ ಮಾಧ್ಯಮವಾದರೂ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹಮಾರೇ ದೇಶ್ ಸಂಘಟನೆಯ ವೆಂಕಟೇಶ ಶಿಂಧೆ, ಸಂದೀಪ ಬಿ., ಮಲ್ಲಿಕಾರ್ಜುನ ಕೊಂಕಣಿ, ದೇವದತ್ತ ಎಂ. ಇತರರು ಇದ್ದರು.