ತಂಪೆರೆದ ಮಳೆರಾಯ

13 vikram 14
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಶನಿವಾರ ಸಂಜೆಯಿಂದ ಮಳೆ ಸುರಿದಿದ್ದು, ರಣಬಿಸಿಲಿನ ಬೇಗೆಯಿಂದ ಬಳಲಿದ್ದ ಜನರು ಕೊಂಚ ನಿರಾಳರಾಗಿದ್ದಾರೆ.
2&3 ದಿನಗಳಿಂದಲೇ ಮೋಡ ಕವಿದ ವಾತಾವರಣವಿದ್ದರೂ ಮಳೆ ಆಗಿರಲಿಲ್ಲ. ಆದರೆ ಶನಿವಾರ ಸಂಜೆ 7 ಗಂಟೆಯಿಂದ ಆರಂಭವಾದ ಮಳೆ ಸುಮಾರು 2 ಗಂಟೆ ಕಾಲ ರಭಸವಾಗಿ ಸುರಿದಿದ್ದರಿಂದ ವಾತಾವರಣ ತಂಪಾಗಿದೆ. ಬಿಸಿಲಿನ ತಾಪದಿಮದ ಕಂಗೆಟ್ಟಿದ್ದ ಜನರು, ಸುರಿಯುತ್ತಿದ್ದ ಮಳೆಯಲ್ಲೇ ತಿರುಗಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಂಜೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಬಳಿಕ 7 ಗಂಟೆ ಹೊತ್ತಿಗೆ ಸುರಿಯಲಾರಂಭಿಸಿದ ಮಳೆಯಿಂದ ಬೈಕ್​ ಸವಾರರು ಮಳೆಯಲ್ಲಿ ನೆನೆಯುತ್ತಲೇ ಸಂಚರಿಸುತ್ತಿದ್ದರು. ಇನ್ನು ಮಳೆಯಿಂದ ಎನ್​ಟಿಟಿಎ್​ ಸೇರಿ ಕೆಲ ಕಡೆಗಳಲ್ಲಿನ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net