ತಮಿಳುನಾಡು ಬಿಜೆಪಿ ರಾಜಕೀಯ ಸುದೀರ್ಘ ಆಟ

9udp annamalai byte
Published on

ಉಡುಪಿ: ಪಕ್ಷ ಕೊಟ್ಟ ಜವಾಬ್ದಾರಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ನಾನು ಯಾವ ಹುದ್ದೆಯಲ್ಲಿರಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ. ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಆಲೋಚನೆ ಮಾಡುತ್ತದೆ. ತಮಿಳುನಾಡು ರಾಜಕೀಯ ಸುದೀರ್ಘ ಕಾಲದ ಆಟ. ಬಹಳ ವರ್ಷದಿಂದ ತಾಳ್ಮೆಯಿಂದ ಕಾದಿದ್ದೇವೆ. ಮುಂದೆಯೂ ಕಾಯುತ್ತೇವೆ. 20 ಅಥವಾ 30 ವರ್ಷವಾದರೂ ಆಗಲಿ ಅಧಿಕಾರಕ್ಕೆ ಬರುತ್ತೇವೆ ಎಂದು ತಮಿಳುನಾಡು ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಚುನಾವಣೆ ಬರುತ್ತಿದೆ. ಗೃಹ ಮಂತ್ರಿಯವರನ್ನು ತಮಿಳುನಾಡು ವಿಪಕ್ಷ ನಾಯಕ ಪಳನಿ ಸ್ವಾಮಿ ಭೇಟಿಯಾಗಿದ್ದಾರೆ. ಮೈತ್ರಿಯ ಬಗ್ಗೆ ಮಾತನಾಡಿದ್ದಾರೆ. ಡಿಎಂಕೆಯನ್ನು ಅಧಿಕಾರದಿಂದ ಇಳಿಸುವುದು ನಮ್ಮೆಲ್ಲರ ಗುರಿ. ಎ ಐ ಡಿ ಎಂ ಕೆ ಬಿಜೆಪಿ ಜೊತೆ ಮೈತ್ರಿ ಬಯಸುತ್ತಿದೆ. ಗೃಹ ಸಚಿವರು ಮೈತ್ರಿಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಮೈತ್ರಿಗೆ ಯಾವುದು ಸರಿಯಾದ ನಿಲುವು ಎಂದು ಪಕ್ಷಕ್ಕೆ ಗೊತ್ತಿದೆ. ಪಕ್ಷದ ತೀಮಾರ್ನಕ್ಕೆ ಬದ್ಧ. ತಮಿಳುನಾಡಿನಲ್ಲಿ ಬದಲಾವಣೆ ಆಗಲಿದೆ ಎಂದರು.

ಡಿಎಂಕೆ ಸರ್ಕಾರದಲ್ಲಿ 13 ಸಚಿವರ ಮೇಲೆ ಭ್ರಷ್ಟಾಚಾರ ಪ್ರಕರಣ ನ್ಯಾಯಾಲಯದಲ್ಲಿದೆ. ಒಬ್ಬ ಮಂತ್ರಿ ಒಂದುವರೆ ವರ್ಷ ಜೈಲಿನಲ್ಲಿದ್ದು ಮತ್ತೆ ಮಂತ್ರಿಯಾಗಿದ್ದಾರೆ. ದೀರ್ಘಕಾಲಿನ ದೃಷ್ಟಿಕೋನದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಾಜಕೀಯದಲ್ಲಿ ಅಧಿಕಾರಕ್ಕಿಂತ ತಾಳ್ಮೆ ಮುಖ್ಯ. ತಾಳ್ಮೆಯಿಂದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ರಾಜೀನಾಮೆ ವಿಚಾರ ಬರುವುದಿಲ್ಲ. ಮುಂದಿನ ರಾಜ್ಯ ಅಧ್ಯಕ್ಷ ಚುನಾವಣೆಗೆ ನಾನು ಸ್ಪರ್ಧೆಸುವುದಿಲ್ಲ ಎಂದರು.

ವಕ್ಫ್​ ಮಸೂದೆಯಿಂದ ಬಡ ಮುಸ್ಲಿಮರಿಗೆ ಅನುಕೂಲ

ವಾಕ್ಫ ಆಕ್ಟ್​ ಗೆ ಅನೇಕ ತಿದ್ದುಪಡಿಗಳಾಗಿವೆ. 2025 ಅತಿ ದೊಡ್ಡ ಬದಲಾವಣೆ ತರಲಾಗಿದೆ. ಪ್ರಜಾಪ್ರಭುತ್ವದಲ್ಲಿ ತಿದ್ದುಪಡಿ ಸಹಜ ಪ್ರಕ್ರಿಯೆ. ಜನರು ಅರ್ಥ ಮಾಡಿಕೊಳ್ಳಬೇಕು. ವಕ್ಫ್​ ದೇಶದಲ್ಲಿ ಅತಿ ಹೆಚ್ಚು ಭೂಮಿಯನ್ನು ಹೊಂದಿದೆ. ಈಗ ಯಾರು ಕೂಡ ಬಂದು ಇದು ನನ್ನ ಭೂಮಿ ಎಂದು ಹೇಳುವಂತಿಲ್ಲ. ಬಡ ಮುಸ್ಲಿಮರಿಗೆ ಹಾಗೂ ಮಹಿಳೆಯರಿಗೆ ಇದರಿಂದ ಅನುಕೂಲವಾಗಲಿದೆ. ಶಿಯಾ ಸುನ್ನಿ ಮುಸ್ಲಿಮರು ಮಾತ್ರ ಪರಿಗಣನೆಯಲ್ಲಿದ್ದರು. ಈಗ ಅಘಾಖಾನ್​ ಮುಸ್ಲಿಂ ,ಬೋರ ಮುಸ್ಲಿಮರಿಗೂ ಅವಕಾಶ ಸಿಕ್ಕಿದೆ. ಇದು ಸಂವಿಧಾನ ವಿರೋಧಿಯಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಸಹಿತ ಅನೇಕ ಪಕ್ಷಗಳು ಸುಪ್ರೀಂ ಕೋರ್ಟ್​ ಮೊರೆ ಹೋಗಿವೆ. ಆದರೆ ಎಲ್ಲಾ ಕೇಸುಗಳು ಎಲ್ಲಾ ಕೇಸುಗಳು ಡಿಸ್ಮಿಸ್​ ಆಗಲಿವೆ ಎಂದರು.

ಗ್ಯಾಸ್​ ದರ ಏರಿಕೆ ತಾತ್ಕಾಲಿಕ

ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ಯಾಸ್​ ದರ ಏರಿಕೆಯಾಗಿದೆ. ಒಂದು ಹಂತದ ಮೇಲೆ ಆಯಿಲ್​ ಮಾರ್ಕೆಟಿಂಗ್​ ಕಂಪನಿಗೂ ನಷ್ಟ ಭರಿಸುವುದು ಕಷ್ಟ. ಹೀಗಾಗಿ ದರ ಏರಿಕೆ ಅನಿವಾರ್ಯ. ಆಯಿಲ್​ ಕಂಪನಿಗಳು ಪೆಟ್ರೋಲ್​, ಡೀಸೆಲ್​ ದರ ಏರಿಕೆ ಮಾಡುವಾಗ ಸರ್ಕಾರ ಮಧ್ಯ ಪ್ರವೇಶಿಸಿ ಏರಿಕೆಯಾಗದಂತೆ ನೋಡಿಕೊಂಡಿದ್ದಾರೆ. ಗ್ಯಾಸ್​ ಹೊರದೇಶದಿಂದ ಬರಬೇಕು, ನಮ್ಮಲ್ಲಿ ಉತ್ಪಾದನೆ ಇಲ್ಲ. ಈಗಿನ ಪರಿಸ್ಥಿತಿ ತಾತ್ಕಾಲಿಕ ಎಂದು ಭಾವಿಸುತ್ತೇನೆ. ಮೋದಿ ಸರ್ಕಾರ ಬಂದ ಬಳಿಕ ಗ್ಯಾಸ್​ ಬಳಕೆ ಜಾಸ್ತಿಯಾಗುತ್ತಿದೆ. 2014ರಲ್ಲಿ ಭಾರತದಲ್ಲಿ ಶೇ. 64 ಜನರಲ್ಲಿ ಮಾತ್ರ ಗ್ಯಾಸ್​ ಬಳಕೆಯಲ್ಲಿತ್ತು. ಇವತ್ತು ಶೇ. 100 ಗ್ಯಾಸ್​ ಕನೆಕ್ಷನ್​ ಇದೆ. ಸಚಿವರು ವಿಶ್ವಮಟ್ಟದಲ್ಲಿ ಗ್ಯಾಸ್​ ಲಭ್ಯತೆ ಹುಡುಕುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net