

ಆನೇಕಲ್: ಅತ್ತಿಬೆಲೆ ಬಳಿ ಅಕ್ರಮವಾಗಿ ಉಡಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಸೋವಿಂದರಾಜನ್ (41) ಬಂಧಿತ. ಆನೇಕಲ್ ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಶ್ರೀಧರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಬಂಧಿತನಿಂದ ಮೂರು ಜೀವಂತ ಉಡ ಮತ್ತು ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಉಡಗಳನ್ನು ಮಾರಾಟ ಮಾಡುತ್ತಿದ್ದ ಮಾಹಿತಿಯು ಬನ್ನೇರುಟ್ಟ ವೈಲ್ಡ್ ಲೈಫ್ ಡಿಎಫ್ಒ ರವೀಂದ್ರನ್ ಅವರಿಗೆ ಬಂದಿದ್ದು, ಪ್ರಾರಂಭದಲ್ಲಿ ಗ್ರಾಹಕರಂತೆ ವ್ಯಾಪಾರ ಕುದುರಿಸಿ, ಒಂದು ಉಡಕ್ಕೆ ಐದು ಸಾವಿರ ರೂಪಾಯಿ ನಿಗದಿ ಮಾಡಿ ಉಡಗಳನ್ನು ನೋಡಿದ ನಂತರ ಬಂಧಿಸಲಾಗಿದೆ.