ತಮಿಳುನಾಡು ರಾಜ್ಯಪಾಲ ಬೇಲೂರು ದೇಗುಲಕ್ಕೆ ಭೇಟಿ

13blrp2
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮತ್ತು ಕುಟುಂಬದವರು ಸೋಮವಾರ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು.
Published on

ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿದ ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಮತ್ತು ಕುಟುಂಬದವರನ್ನು ಸೋಮವಾರ ದೇಗುಲ ವ್ಯವಸ್ಥಾಪನಾ ಸಮೀತಿಯಿಂದ ಸಂಪ್ರದಾಯದಂತೆ ದೇವಸ್ಥಾನದ ಅರ್ಚಕರು ಪೂರ್ಣ ಕುಂಭದೊಂದಿಗೆ ಸ್ವಾಗತಿಳಿಸಿದರು.

ರಾಜ್ಯಪಾಲ ಆರ್.ಎನ್.ರವಿ, ಶ್ರೀ ಚನ್ನಕೇಶವಸ್ವಾಮಿ ದೇಗುಲದೊಳಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ದೇಗುಲದಲ್ಲಿನ ಶಿಲ್ಪಕಲೆ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ರಾಜ್ಯಪಾಲರು ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿದ ಸಂದರ್ಭ ಅವರೊಂದಿಗಿದ್ದ ಝಡ್ ಪ್ಲಸ್ ಸೆಕ್ಯೂರಿಟಿಯೊಂದಿಗೆ ಸ್ಥಳೀಯವಾಗಿಯೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜತೆಗೆ ರಾಜ್ಯಪಾಲರು ದೇಗುಲದೊಳಕ್ಕೆ ಹೋಗಿ ಹೊರ ಬರುವವರೆಗೂ ಪ್ರವಾಸಿಗರು ಮತ್ತು ಭಕ್ತರು ಒಂದೂವರೆ ಗಂಟೆಗೂ ಹೆಚ್ಚು ಕಾಲ ದೇಗುಲದ ಹೊರ ಬಾಗದಲ್ಲಿ ಕಾದು ನಿಲ್ಲಬೇಕಾಯಿತು.

ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ, ಅರಸೀಕೆರೆ ಡಿವೈಎಸ್‌ಪಿ ಲೋಕೇಶ್, ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಇಒ ಯೋಗೇಶ್, ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಗೌತಮ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net