

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಪಂಗೆ ಅಧ್ಯಕ್ಷೆ-ಉಪಾಧ್ಯಕ್ಷರಾಗಿ ಏಣಿಗಿ ಪೂರ್ಣಿಮಾ ಹನುಮೇಶ, ಮ್ಯಾಗಳಮನಿ ರುದ್ರಮ್ಮ ಬಸವರಾಜ ಆಯ್ಕೆಯಾದರು.
ಒಟ್ಟು 12 ಸದಸ್ಯ ಬಲದ ಗ್ರಾಪಂ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ನಿಗದಿಯಾಗಿತ್ತು. ಆ ವರ್ಗಕ್ಕೆ ಸೇರಿದ ಸದಸ್ಯೆ ಏಣಿಗಿ ಪೂರ್ಣಿಮಾ ಮಾತ್ರ ಇದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಇದನ್ನೂ ಓದಿ: ಗ್ರಾಪಂ ವ್ಯಾಪ್ತಿಯಲ್ಲಿ ‘ಕೂಸಿನ ಮನೆ’
ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಮ್ಯಾಗಳಮನಿ ರುದ್ರಮ್ಮ, ಎಚ್.ದೊಡ್ಡಬಸಪ್ಪ ನಾಮಪತ್ರ ಸಲ್ಲಿಸಿದ್ದರು. ಇಬ್ಬರೂ ತಲಾ 6 ಮತ ಗಳಿಸಿದರು. ಬಳಿಕ ಚುನಾವಣಾಧಿಕಾರಿ ಸಿಡಿಪಿಒ ಸುದೀಪ್ ಉಂಕಿ, ಲಾಟರಿ ಪ್ರಕ್ರಿಯೆ ನಡೆಸಿದರು. ಚೀಟಿಯಲ್ಲಿ ಮ್ಯಾಗಳಮನಿ ರುದ್ರಮ್ಮ ಹೆಸರು ಬಂದಿದ್ದರಿಂದ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಗ್ರಾಪಂ ಸದಸ್ಯರಾದ ಬಣಕಾರ ಬಸಮ್ಮ, ಛಲವಾದಿ ಪ್ರತಿಭಾ, ಎಂ.ಎನ್.ಮಂಜುನಾಥ, ಮೆಹಬೂಬ್ ಸಾಬ್ ಸಂಡೂರು, ರೆಡ್ಡಿ ಬಸಲಿಂಗನಗೌಡ, ಆನೇಕಲ್ಲು ದೊಡ್ಡಬಸಪ್ಪ, ಹರಿಜನ ದೊಡ್ಡಬಸಪ್ಪ, ಎಂ.ಶಿವಕುಮಾರ್, ಸಪ್ಪರದ ಕಮಾಲಾಕ್ಷಿ, ಕೆ.ಶಲೀಮಾ ಬೇಗಂ ಹಾಜರಿದ್ದರು.