

ಮೂಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಉಡುಪಿ ಗೋಪಾಲ ಜೋಯಿಸ ಅವರಿಂದ ತಾಂಬೂಲ ಪ್ರಶ್ನೆ ನಡೆಯಿತು.
ಶಿಮಂತೂರು ಎಳತ್ತೂರು ಗ್ರಾಮಸ್ಥರ ರಾಜನ್ ದೈವ ಶ್ರೀ ಧರ್ಮಜಾರಂದಾಯ ಮತ್ತು ಶ್ರೀ ಆದಿಜನಾರ್ದನ ದೇವರ ಭೇಟಿಯ ಬಗ್ಗೆ ಚರ್ಚೆ ನಡೆಸಲಾಯಿತು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆದು ಪ್ರಾಯಶ್ಚಿತ್ತ ನಡೆಸಲು ತೀರ್ಮಾನಿಸಲಾಯಿತು.
ಕ್ಷೇತ್ರದ ಶಿಬರೂರು ವೇದವ್ಯಾಸ ತಂತ್ರಿ, ಅರ್ಚಕ ಪುರುಷೋತ್ತಮ ಭಟ್, ಕೃಷ್ಣ ಭಟ್ ಅಡ್ವೆ, ಶ್ರೀಕಾಂತ್ ಭಟ್ ಕೊಲಕಾಡಿ, ಆಡಳಿತ ಮೊಕ್ತೇಸರ ಉದಯ ಕುಮಾರ್ ಶೆಟ್ಟಿ, ಬಾಬಾ ರಂಜನ್ ಶೆಟ್ಟಿ ಮಜಲಗುತ್ತು, ರಾಮದಾಸ ಶೆಟ್ಟಿ ಬಾಳಿಕೆ ಮನೆ, ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರೂಪಾ ವಿಷ್ಣುಮೂರ್ತಿ ಭಟ್, ಶಾಂತಾರಾಮ ಶೆಟ್ಟಿ ತೆಂಗಾಳಿ, ಶಶಿಕಲಾ ಎನ್.ಕುಂದರ್, ಅರುಣ್ ಕುಮಾರ್ ಕಟ್ಟಪುಣಿ, ನಂದನ ಶೆಟ್ಟಿ ಕುಬೆವೂರು, ಗ್ರಾಮಸ್ಥರಾದ ಶಂಕರ್ ಮಾಸ್ಟರ್, ತೇಜರಾಜ ಶೆಟ್ಟಿ ಮಜಲಗುತ್ತು, ಮೋಹನ್ ಕೋಟ್ಯಾನ್, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಹರೀಶ್ ಶೆಟ್ಟಿ, ದಿನೇಶ್ಚಂದ್ರ ಅಜಿಲ, ವಿಠಲ ಶೆಟ್ಟಿ, ದಿವಾಕರ ಶೆಟ್ಟಿ ಮಜಲಗುತ್ತು ಉಪಸ್ಥಿತರಿದ್ದರು.