

ತಾಂಬಾ: ಗ್ರಾಮದ ಶ್ರಾವಣ ಮಾಸದ ಕೊನೆಯ ದಿನ ಶುಕ್ರವಾರ ಗ್ರಾಮದ ಗುರು-ಹಿರಿಯರು ಸೇರಿ ವೀರಭದ್ರೇಶ್ವರ ಮತ್ತು ಕಾಳಿಕಾ ದೇವಿಗೆ ಸಕಾಲದಲ್ಲಿ ಮಳೆಯನ್ನು ಕರುಣಿಸುವಂತೆ ಪ್ರಾರ್ಥಿಸಿ 101 ಲೀಟರ್ ಹಾಲಿನ ಅಭಿಷೇಕ ಮತ್ತು ವಿಶೇಷ ಪೂಜೆ ಮಾಡಲಾಯಿತು.
ದಾನಯ್ಯ ವಸದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೇಷ್ಠವಾದ ಮನುಷ್ಯ ಜನ್ಮದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಸಾಧನೆ ಮಾಡಬೇಕು. ಕ್ಷೇತ್ರದಲ್ಲಿ ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಳೆಯಾಗುವವರೆಗೆ ನೀರಿನ ವ್ಯವಸ್ಥೆ ಮಾಡಿ ಈ ಭಾಗದ ರೈತರು ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಬೇಕು ಎಂದು ಹೇಳಿದರು.
ಸಂಗನಬಸವ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಸಿದ್ದು ಹತ್ತಳ್ಳಿ ಮಾತನಾಡಿದರು. ಅವಧೂತ ಕುಲಕರ್ಣಿ, ಜಕ್ಕಪ್ಪ ಹತ್ತಳ್ಳಿ, ಗಜಾನಂದ ಭರಮಣ್ಣ, ಶರಣಪ್ಪ ನಂದರಗಿ, ಈರಣ್ಣ ಬ್ಯಾಕೋಡ, ಶ್ರೀಕಾತ ಬಾಳ್ಳಿ, ಗುರಲಿಂಗಪ್ಪ ಗೊಡಿಹಾಳ, ಮಲ್ಕಪ್ಪ ರೊಟ್ಟಿ, ವಿಜಯಾನಂದ ಪತ್ತಾರ, ಮುರುಗೇಶ ಕಿಣಗಿ, ಸಿದ್ದು ಭತಗುಣಕಿ, ರಾಘವೇಂದ್ರ ದೇಶಮುಖ ಇತರರಿದ್ದರು.