ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ

TAMBA-3-1
Published on

ತಾಂಬಾ: ಗ್ರಾಮದ ಹಜರತ್ ದಾವಲಮಲಿಕ್‌ರ ಭಕ್ತರ ಅನುಕೂಲಕ್ಕಾಗಿ ಸಮುದಾಯ ಭವನ ಸೇರಿ ಹಲವು ಮೂಲ ಸೌಲಭ್ಯಗಳನ್ನು ಕಲ್ಪಿಸುವುದು, ಗ್ರಾಮವನ್ನು ಸಮಗ್ರ ಅಭಿವೃದ್ಧಿಗೊಳಿಸಲಾಗುವುದೆಂದು ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಹೇಳಿದರು.

ಗ್ರಾಮದ ಹಜರತ್ ದಾವಲಮಲೀಕ್ ದರ್ಗಾ ಬಳಿ ಸಮುದಾಯಭವನದ ಭೂಮಿಪೂಜೆ ಸಮಾರಂಭದಲ್ಲಿ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಗ್ರಾಮದ ಯುವ ಮುಖಂಡ ಸಿದ್ದು ಹತ್ತಳ್ಳಿ ಮಾತನಾಡಿದರು. ಗ್ರಾಮದ ಯುವ ಮುಖಂಡ ಅಪ್ಪಣ್ಣ ಕಲ್ಲೂರ, ತಾಪಂ ಸದಸ್ಯ ಪ್ರಕಾಶ ಮುಂಜಿ, ಬಂದು ಇಂಡಿ, ಮೊಹಮ್ಮದೀಯಾ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ತ್ತೆಸಾಬ ಉಜನಿ, ರಾಜು ಗಂಗನಹಳ್ಳಿ, ಸತೀಶ ಹಿರೇಕುರಬರ, ಮಲ್ಲಿಕಾರ್ಜುನ ಹೊರ್ತಿ, ಕಾಶಿನಾಥ ಹೊರಪೇಟಿ, ಅಡಿವೆಪ್ಪ ರೊಟ್ಟಿ, ಅಲ್ಲಾಬಕ್ಷ ಚಿಕ್ಕಗಸಿ, ಮಲ್ಲಿಕಾರ್ಜುನ ಚಿಂಚೋಳಿ, ರಾಕೇಶ ಕಿಣಗಿ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net