

ತಾಂಬಾ: ಗುತ್ತಿ ಬಸವಣ್ಣ ಕಾಲುವೆಯಲ್ಲಿ ನೀರು ಹರಿಸಲು ಪ್ರಬಲ ಇಚ್ಛಾಶಕ್ತಿ ಕೊರತೆ, ಸಂಪನ್ಮೂಲ ಕ್ರೋಡೀಕರಣ, ವೃತ್ತಿಪರತೆ, ಮುಂದಾಲೋಚನೆ, ಜನಹಿತದೃಷ್ಟಿ ಕೊರತೆ ಎದ್ದು ಕಾಣುತ್ತಿದೆ. ರೈತರ ಹಿತದೃಷ್ಟಿಯಿಂದ ನೀರು ಹರಿಸಲೇಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.ಗ್ರಾಮದ ಸಂಗನಬಸವೇಶ್ವರ ವೃತ್ತದಲ್ಲಿ ಗುತ್ತಿ ಬಸವಣ್ಣ ಹೋರಾಟಗಾರರು ಅರೆಬೆತ್ತಲೆ ಮೆರವಣಿಗೆ ಮಾಡಿದ ನಂತರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತಡವಲಗಾದ ರಾಚೋಟೇಶ್ವರ ಶ್ರೀಗಳು ಮಾತನಾಡಿ, ಇಂಡಿ ಮತ್ತು ಸಿಂದಗಿ ತಾಲೂಕಿನ ಆರ್ಥಿಕ ಬೆಳವಣಿಗೆ, ಕೃಷಿ ಮತ್ತು ಕುಡಿಯುವ ನೀರಿನ ದಾಹ ತಣಿಸಲು ಉದ್ದೇಶಿತ ಗುತ್ತಿ ಬಸವಣ್ಣ ಯೋಜನೆ ಸಹಕಾರಿಯಾಗಲಿದೆ. ಆದ್ದರಿಂದ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಿ ಎಂದು ಹೇಳಿದರು.
ಹೋರಾಟದ ಮುಖಂಡ ಮಲ್ಲಯ್ಯ ಸಾರಂಗಮಠ ಮಾತನಾಡಿ, ಇಂಡಿ ತಾಲೂಕಿನ ಶೇ.70 ಭಾಗ ನೀರಾವರಿಯಿಂದ ವಂಚಿತವಾಗಿದೆ. ಅಂಥಹ ವಂಚಿತ ಪ್ರದೇಶಗಳಲ್ಲಿ ಕಾಲುವೆ ಕಾರ್ಯ ಮುಗಿದಿದ್ದು, ಏನಾದರೂ ಮಾಡಿ ನೀರು ಹರಿಸಿ ಎಂದು ಒತ್ತಾಯಿಸಿದರು.
ಬಂಥನಾಳದ ಡಾ.ವೃಷಭಲಿಂಗೇಶ್ವರ ಶ್ರೀಗಳು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಅಹಿರಸಂಗದ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು, ರೋಡಗಿಯ ಅಭಿನವ ಶಿವಲಿಂಗ ಶ್ರೀಗಳು, ಅಥರ್ಗಾ ಅಕ್ಕಮಹಾದೇವಿ ಮಠದ ಮಾತಾ ವಚನ ಶ್ರೀಗಳು, ಡಾ.ಪ್ರಭುಗೌಡ ಬಿರಾದಾರ, ಈರಣ್ಣ ಬ್ಯಾಕೋಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಚಪ್ಪ ಗಳೆದ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಯಗೊಂಡ ಪೂಜಾರಿ, ಈರಣ್ಣ ಬ್ಯಾಕೋಡ, ಸಿದ್ದಪ್ಪ ಹತ್ತಳ್ಳಿ, ಏಗಪ್ಪ ಹೊರಪೇಟಿ, ಸಿದ್ಧೇಶ್ವರ ಕಿಣಗಿ, ಬೀರಪ್ಪ ವಗ್ಗಿ, ಅಡೆಪ್ಪ ರೊಟ್ಟಿ, ಮಲಕಪ್ಪ ನಾವದಗಿ, ರೇವಪ್ಪ ಹೊರ್ತಿ, ಚಂದ್ರಮ ಮೂಲಿಮನಿ, ಸಿದ್ದು ಬೂದಿಹಾಳ, ಶೇಖಪ್ಪ ರೊಟ್ಟಿ, ಸಿದ್ದಗೊಂಡಪ್ಪ ಸೋಮನಿಂಗ ಇತರರಿದ್ದರು.