ಸುಳ್ಯ ಅಜ್ಜಾವರ ಗ್ರಾಪಂ ಸದಸ್ಯನ ಮೇಲೆ ತಲ್ವಾರ್ ದಾಳಿ

Attack Knife
Published on

ಸುಳ್ಯ: ಅಜ್ಜಾವರ ಗ್ರಾಪಂ ಸದಸ್ಯ ವಿಶ್ವನಾಥ್ ಎಂಬುವರಿಗೆ ಮದ್ಯ ಸೇವಿಸಿದ ಇಬ್ಬರು ಹಲ್ಲೆ ನಡೆಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಯೋಗೀಶ್ ಹಾಗೂ ಆತನ ಸಹೋದರ ರಾಘವ್ ಆರೋಪಿಗಳು.

ಸೋಮವಾರ ರಾತ್ರಿ ಮುಳ್ಯ ಭಜನಾ ಮಂದಿರದ ಬಳಿ ಯಕ್ಷಗಾನ ಕಾರ್ಯಕ್ರಮವಿತ್ತು. ಅದನ್ನು ವೀಕ್ಷಿಸಲು ಗ್ರಾಪಂ ಸದಸ್ಯ ವಿಶ್ವನಾಥ್ ಹೋಗಿದ್ದು, ಅಲ್ಲಿಗೆ ಯೋಗೀಶ್  ಕೂಡ ಹೋಗಿದ್ದು ಇಬ್ಬರ ನಡುವೆ ಜಗಳ ನಡೆದಿದೆ. ಇದೇ ವೇಳೆ ಯೋಗೀಶ್ ಸಹೋದರ ರಾಘವ್ ಕೂಡ ಜತೆಯಾಗಿದ್ದು ವಿಶ್ವನಾಥ್ ಮೇಲೆ ತಲ್ವಾರ್‌ನಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ವಿಶ್ವನಾಥ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net